ಪ್ರಪಂಚದಾದ್ಯಂತ ಮಹಿಳೆಯರ ವಿರುದ್ಧ ಅತ್ಯಾಚಾರದಲ್ಲಿ ಏರಿಕೆಯಾಗಿದೆ. ಮಹಿಳೆಯರು ತಮ್ಮನ್ನು ತಾವು ಆಕ್ರಮಣದಿಂದ ರಕ್ಷಿಸಿಕೊಳ್ಳುವಲ್ಲಿ ಜಾಗೃತಿ ಅಗತ್ಯ ಇದೆ. ಈ ಸನ್ನಿವೇಶದಲ್ಲಿ MIT ಯ ಭಾರತೀಯ ವಿಜ್ಞಾನಿ ಮನೀಶಾ ಮೋಹನ್ ಮಹಿಳೆಯರ ವಿರುದ್ಧ ನಡೆಯುವ ಅತ್ಯಾಚಾರ ಕಡಿಮೆ ಮಾಡಲು ಇಂಟ್ರೆಪಿಡ್ ಎಂಬ ಡಿವೈಸ್ ರಚಿಸಿದ್ದಾರೆ.
ಮಹಿಳೆಯ ಒಪ್ಪಿಗೆ ಇಲ್ಲದೆ ಬಟ್ಟೆ ಕಳಚಿದರೆ ಅಲಾರ್ಮ್ ಆಗುವ ಸ್ಟಿಕರ್ ಅನ್ನು ಅವರು ಅಭಿವೃದ್ಧಿ ಪಡಿಸಿದ್ದಾರೆ. ಸಂಶೋಧನೆ ಹೇಳುವಂತೆ, ಪ್ರತಿ ಎರಡು ನಿಮಿಷಗಳಲ್ಲಿ ಮಹಿಳೆಯೊಬ್ಬಳು ಅತ್ಯಾಚಾರಕ್ಕೊಳಗಾಗುತ್ತಾಳೆ. ಆದರೆ ಅದರಲ್ಲಿ ಹೆಚ್ಚಿನವು ನೋಂದಾಯಿಸಲ್ಪಡುವುದಿಲ್ಲ. ಒಟ್ಟು ಅತ್ಯಾಚಾರಗಳಲ್ಲಿ ಶೇ. 6 ರಷ್ಟು ಮಾತ್ರ ನೋಂದಾಯಿಸಲಾಗುತ್ತದೆ.
ಅತ್ಯಾಚಾರ ಬಲಿಪಶು ಮಹಿಳೆ ಪ್ರಜ್ಞೆ ತಪ್ಪಿದಾಗ ಅಥವಾ ಮದ್ಯದ ಸ್ಥಿತಿಯಲ್ಲಿದ್ದಾಗಲೂ ಸಹ ಡಿವೈಸ್ ಜಾಗೃತವಾಗುತ್ತದೆ. ಸ್ಮಾರ್ಟ್ಫೋನ್ ಅಪ್ಲಿಕೇಶನ್ನೊಂದಿಗೆ ಸಂಯೋಜಿತವಾಗಿರುವ ಒಂದು ಸಮಗ್ರ ಬ್ಲೂಟೂತ್ ಸಾಧನವು ಪೂರ್ವಭಾವಿಯಾಗಿ ಕುಟುಂಬ ಮತ್ತು ಸ್ನೇಹಿತರು, ಹತ್ತಿರದ ಜನರ ಮೊಬೈಲ್ ಗೆ ದೊಡ್ಡ ಶಬ್ದದಿಂದ ಎಚ್ಚರಿಕೆ ಸಿಗ್ನಲ್ ಕಳುಹಿಸುತ್ತದೆ. ಇದು ಅತ್ಯಾಚಾರ ಹಿಮ್ಮೆಟ್ಟಿಸಲು, ತಕ್ಷಣವೇ ಅಪರಾಧದ ಸ್ಥಳವನ್ನು ಪತ್ತೆ ಹಚ್ಚಲು ಸಹಕಾರಿ ಮತ್ತು ಅತ್ಯಾಚಾರಿಗಳೂ ಈ ಅಲಾರಮ್ ಶಬ್ದದಿಂದ ಭಯ ಪಡಬಹುದು. ಮಾತ್ರವಲ್ಲ, ಅಲಾರಮ್ ಪುನರಾವರ್ತಿತ ಎಚ್ಚರಿಕೆ ಕೊಡುವ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲಾಗಿದೆ.
ಸಂಜೆ ಆರು ಗಂಟೆಯ ಬಳಿಕ ಮಹಿಳೆಯರ ಬಗ್ಗೆ ಜಾಗ್ರತೆ ವಹಿಸಲಾಗುತ್ತದೆ. ಆದರೆ ಅದಕ್ಕಿಂತಲೂ ಅವರಿಗೆ ಭದ್ರತೆ ಮುಖ್ಯ ಎಂದು ಚೆನ್ನೈಯ ಮನೀಶಾ ಮೋಹನ್ ಹೇಳುತ್ತಾರೆ.