ಕೇಂದ್ರದ ಅಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಅವರು ತಮ್ಮ ವಿವಾದಾತ್ಮಕ ಹೇಳಿಕೆಗೆ ಇತ್ತೀಚೆಗೆ ಸದಾ ಸುದ್ದಿಯಲ್ಲಿದ್ದಾರೆ.
ಮಾಜಿ ಕಲಾಬುರ್ಗಿ ಜಿಲ್ಲಾ ಪಂಚಾಯತ್ ಸದಸ್ಯ ಮತ್ತು ಆಲ್ ಇಂಡಿಯಾ ಮಜ್ಲಿಸ್ ಇ ಇಥೇಹಾದುಲ್ ಮುಸ್ಲಿಮೀನ್ ನಾಯಕ ಗುರುಶಾಂತ್ ಪಟ್ಟೇದರ ಅವರು, ಅನಂತ್ ಕುಮಾರ್ ಹೆಗಡೆಯವರ ನಾಲಿಗೆ ಕತ್ತರಿಸಿ ತಂದ ವ್ಯಕ್ತಿಗೆ ಒಂದು ಕೋಟಿ ಬಹುಮಾನ ಘೋಷಿಸಿ ಹೊಸ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅನಂತ್ ಕುಮಾರ್ ಹೆಗಡೆ, ಸಂವಿಧಾನ ಬದಲಾವಣೆ ಮಾಡುತ್ತೇವೆ, ಜಾತ್ಯತೀತರಿಗೆ ಅಪ್ಪ ಅಮ್ಮನ ಗುರುತು ಇಲ್ಲ ಎಂದೆಲ್ಲಾ ಹೇಳಿ ಇಲ್ಲಿನ ಅಲ್ಪಸಂಖ್ಯಾತರು ದಲಿತರಿಗೆ ಅವಮಾನ ಮಾಡಿದ್ದಾರೆ . ಆದ್ದರಿಂದ ಅವರ ನಾಲಿಗೆ ಕತ್ತರಿಸಿದವರಿಗೆ ಒಂದು ಕೋಟಿ ರೂಪಾಯಿ ಕೊಡುವುದಾಗಿ ಅವರು ಮಾಧ್ಯಮದ ಮುಂದೆ ಹೇಳಿದ್ದಾರೆ.