ಎರಡು ತಿಂಗಳ ಹಿಂದೆ ಹರ್ಯಾಣದ ಗುರ್ಗಾಂವ್ನ ಪ್ರತಿಷ್ಠಿತ ರಯಾನ್ ಇಂಟರ್ನ್ಯಾಶ ನಲ್ ಸ್ಕೂಲ್ನ ಶೌಚಾಲಯದಲ್ಲಿ 2ನೇ ತರಗತಿಯ ವಿದ್ಯಾರ್ಥಿ ಪ್ರದ್ಯುಮ್ನ ಎಂಬ ಬಾಲಕನ ಶವ ಪತ್ತೆಯಾಗಿತ್ತು. ವಿದ್ಯಾರ್ಥಿಯ ಕತ್ತು ಸೀಳಿ ಕೊಲ್ಲ ಲಾಗಿತ್ತು. ಕತ್ತಿಯು ಶೌಚಾಲಯದ ಆವರಣದಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಈ ವಿದ್ಯಾರ್ಥಿಯನ್ನು ಅದೇ ಶಾಲೆಯ ಬಸ್ ನಿರ್ವಾಹಕ ಅಶೋಕ್ ಕುಮಾರ್ ಎಂಬಾತ ಲೈಂಗಿಕ ಕಿರುಕುಳ ನೀಡಿ ಹತ್ಯೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದರು. ಮಾತ್ರವಲ್ಲ, ಆತ ತಪ್ಪೊಪ್ಪಿಕೊಂಡಿದ್ದಾನೆಂದೂ ಹೇಳಿಕೊಂಡಿದ್ದರು. ಆದರೆ ಪ್ರದ್ಯುಮ್ನನ ಹೆತ್ತವರು ಇದನ್ನು ಒಪ್ಪಲು ಸಿದ್ಧರಿರಲಿಲ್ಲ. ಇದೆಲ್ಲಾ ಪೊಲೀಸರ ಕಟ್ಟು ಕತೆಯೆಂದು ಹೇಳಿ ತನಿಖೆಯ ಬಗ್ಗೆ ಅಸಂತೃಪ್ತಿ ಪ್ರಕಟಿಸಿದ್ದರು. ಆದರೆ ಸಿಬಿಐ ವಿಚಾ ರಣೆಯ ಬಳಿಕ ಅದೇ ಶಾಲೆಯಲ್ಲಿ ಕಲಿಕೆಯಲ್ಲಿ ಹಿಂದಿದ್ದ 11ನೇ ತರಗತಿ ವಿದ್ಯಾರ್ಥಿಯೊಬ್ಬ ಪರೀಕ್ಷೆಯನ್ನು ಮತ್ತು ಶಿಕ್ಷಕ ಪೊಷಕರ ಸಭೆಯನ್ನು ಮುಂದೂಡಿಸಬೇಕೆಂಬ ಕಾರಣಕ್ಕೆ ಹತ್ಯೆ ಮಾಡಿದ್ದಾನೆಂಬ ವಿಚಾರ ಬೆಳಕಿಗೆ ಬಂದು ಪ್ರಕರಣ ಹೊಸ ತಿರುವು ಪಡೆದಿದೆ.