ಲಂಡನ್: ಸಾಮಾಜಿಕ ಜಾಲತಾಣದಲ್ಲಿ ನಗ್ನ ಫೋಟೋ ಹರಿಬಿಡುವ ಮೂಲಕ ತೀವ್ರ ವಿವಾದಕ್ಕೆ ಗುರಿಯಾಗಿದ್ದ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಾರಾ ಟೇಲರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ಶುಕ್ರವಾರ (ಸೆ 27) ನಿವೃತ್ತಿ ಕುರಿತು ಪ್ರಕಟಿಸಿರುವ ಅವರು, ಮಾನಸಿಕ ಗೊಂದಲದಿಂದ ಬಳಲುತ್ತಿರುವುದರಿಂದ ತಾವು ಈ ನಿರ್ಧಾರಕ್ಕೆ ಬಂದಿರುವುದಾಗಿ ಸಾರಾ ಟೇಲರ್ ಹೇಳಿಕೊಂಡಿದ್ದಾರೆಂದು ಅಧಿಕೃತ ಮೂಲಗಳು ಹೇಳಿವೆ.

30 ವರ್ಷ ವಯಸ್ಸಿನ ಸಾರಾ ಟೇಲರ್, 2006ರಲ್ಲಿ ಇಂಗ್ಲೆಂಡ್ ತಂಡದ ಪರ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಸಾರಾ ಒಟ್ಟು 6,553 ರನ್ ಸೇರಿಸಿದ್ದು, ಇದು ಇಂಗ್ಲೆಂಡ್ ಮಹಿಳಾ ತಂಡದ ಪರ ಈ ವರೆಗಿನ ಗರಿಷ್ಠ ಮೊತ್ತ ಎನಿಸಿದೆ. ಸಾರಾ ಟೇಲರ್ ಇತ್ತೀಚಿಗೆ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ನಗ್ನ ಫೋಟೋ ಹಾಕಿ ಹೆಚ್ಚು ಸುದ್ದಿಯಾಗಿದ್ದರು.

ಆರೋಗ್ಯ ಸಮಸ್ಯೆಯಿಂದಾಗಿ ನಾನು ನಿವೃತ್ತಿ ಹೇಳುವ ಕಠಿಣ ನಿರ್ಧಾರ ಕೈಕೊಂಡೆ. ನನ್ನ ಆರೋಗ್ಯದ ಹಿನ್ನೆಲೆಯಲ್ಲಿ ನಾನು ಇಂತಹ ಕಠಿಣ ನಿರ್ಧಾರ ಕೈಕೊಳ್ಳಲೇ ಬೇಕಾಗಿತ್ತು, ನಾನು ಕೈಕೊಂಡ ಈ ನಿರ್ಧಾರ ಸರಿಯಾದುದು ಎಂದು ನಾನು ಭಾವಿಸುತ್ತೇನೆ. ನನ್ನನ್ನು ಬೆಂಬಲಿಸಿದ್ದಕ್ಕಾಗಿ ತಂಡದ ಹಾಲಿ ಹಾಗೂ ಮಾಜಿ ಆಟಗಾರ್ತಿಯರಿಗೆ ಮತ್ತು ಕ್ರಿಕೆಟ್ ಮಂಡಳಿಗೆ ಧನ್ಯವಾದ ಸಲ್ಲಿಸುತ್ತಿದೇನೆ,’ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಸಾರಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here