ಬೆಂಗಳೂರು: ಗ್ಯಾಸ್ ಸಿಲಿಂಡರ್ ಸ್ಪೋಟದ ಬಗ್ಗೆ ಯಾವಾಗಲೂ ಒಂದು ಆತಂಕ ಇದ್ದೇ ಇರುತ್ತದೆ. ಬಹಳಷ್ಟು ಕಡೆ ಅನಾಹುತಗಳೂ ಸಂಭವಿಸಿದೆ. ಆದರೆ ಇನ್ನು ಮುಂದೆ ಭಯ ಪಡುವ ಅವಶ್ಯಕತೆ ಇಲ್ಲ. ಯಾಕೆಂದರೆ ಫೈಬರ್ ಗ್ಯಾಸ್ ಸಿಲಿಂಡರ್ ಮಾರುಕಟ್ಟೆಗೆ ಬಂದಿದೆ. ಆದ್ದರಿಂದ ಇನ್ಮುಂದೆ ಗ್ಯಾಸ್ ಹೊರುವ ಭಾರದ ಚಿಂತೆ ಇರಲ್ಲ. ಯಾಕೆಂದರೆ ಇದು ಬಹಳ ಹಗುರ ಆಗಿರುತ್ತದೆ. ಗ್ಯಾಸ್ ಖಾಲಿಯಾಗಿದೆಯೇ ಎಂಬ ಮಾಹಿತಿ ಕೂಡಾ ಲಭ್ಯವಾಗಲಿದೆ.

ಭಾರತದಲ್ಲಿ ಇದೇ ಮೊದಲ ಬಾರಿಗೆ ಕಾನ್ಫಿಡೆನ್ಸ್ ಪೆಟ್ರೋಲಿಯಂ ಲಿಮಿಟೆಡ್ ವತಿಯಿಂದ ಗೋ ಗ್ಯಾಸ್ ಇಲೈಟ್ ಬಿಡುಗಡೆಯಾಗಿದ್ದು, ನಾಗ್ಪುರ್ ನಂತರ ಈ ಫೈಬರ್ ಸಿಲಿಂಡರ್‍ಗಳು ಕರ್ನಾಟಕದಲ್ಲೂ ಲಭ್ಯವಾಗಲಿದೆ.

ರಾಕೆಟ್‍ನಲ್ಲಿ ಉಪಯೋಗಿಸುವ ನೋರೀಲ್ ಮೆಟೀರಿಯಲ್‍ನಿಂದ ಈ ಸಿಲಿಂಡರ್ ತಯಾರಿಸಲ್ಪಟ್ಟಿದೆ. ಒಂದು ವೇಳೆ ಗ್ಯಾಸ್ ಲೀಕ್ ಆದರೂ ಹೊರಭಾಗದ ಫೈಬರ್ ಬಾಡಿ ಮೆಲ್ಟ್ ಆಗುತ್ತದೆಯೇ ವಿನಃ ಸ್ಫೋಟಗೊಳ್ಳುವುದಿಲ್ಲ.

Leave a Reply