ಅಪರೂಪದ ಸಂಗತಿಯೆಂಬಂತೆ ಭಾರತೀ ಕ್ರಿಕೆಟ್ ತಂಡ ಮಾಜಿ ವೇಗದ ಬೌಲರ್ ಮತ್ತು ಹಾಲಿ ವೇಗದ ಬೌಲರ್ ಒಂದೇ ದಿನ ಮದುವೆಯಾಗಿದ್ದಾರೆ. ಹೌದು.. ಭಾರತ ಕ್ರಿಕೆಟ್ ಇತಿಹಾಸದಲ್ಲೇ ಅತ್ಯುತ್ತಮ ವೇಗದ ಬೌಲರ್ ಎಂದು ಹೆಸರುವಾಸಿಯಾಗಿದ್ದ ಝಹೀರ್ ಖಾನ್ ಹಾಗೂ ಸದು ಉತ್ತಮ ಪ್ರದರ್ಶನ ತೋರುತ್ತಿರುವ ಭುವನೇಶ್ವರ್ ಕುಮಾರ್ ಇಬ್ಬರೂ ಇಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಝಹೀರ್ ಖಾನ್ ಇಂದು ಬೆಳಿಗ್ಗೆ ಸರಳವಾಗಿ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದು, ಭುವನೇಶ್ವರ್ ಮದುವೆ ಇಂದು ಸಂಜೆ ನಡೆಯಲಿದೆ ಎಂದು ತಿಳಿದು ಬಂದಿದೆ.