ಜೈಪುರ: ಕಾಂಡೋಮ್ ಜಾಹೀರಾತುಗಳನ್ನು ದಿನವಿಡೀ ಏಕೆ ಪ್ರಸಾರ ಮಾಡಬಾರದು ಎಂಬ ಕಾರಣಕ್ಕಾಗಿ ರಾಜಸ್ಥಾನ ಹೈಕೋರ್ಟ್ ಬುಧವಾರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನೋಟಿಸ್ ಕಳುಹಿಸಿದೆ. ಜಾಹೀರಾತುಗಳನ್ನು ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ಮಾತ್ರ ನಲ್ಲಿ ಏಕೆ ಪ್ರಸಾರ ಮಾಡಬೇಕು? ಎಂದು ಕೇಳಿದೆ.

“ಅಸಭ್ಯ ಮತ್ತು ಸೂಕ್ತವಲ್ಲದ” ವಿಷಯವನ್ನು ವೀಕ್ಷಿಸುದರಿಂದ ಮಕ್ಕಳನ್ನು ತಡೆಗಟ್ಟುವ ದೃಷ್ಟಿಯಿಂದ ಕಾಂಡೋಮ್ ಜಾಹೀರಾತುಗಳನ್ನು ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಗಳ ಮಧ್ಯೆ ತೋರಿಸಬೇಕೆಂದು ಸಚಿವಾಲಯ ಸೂಚಿಸಿತ್ತು.

ಈ ಆದೇಶವನ್ನು ಸರ್ಕಾರೇತರ ಸಂಘಟನೆ ಗ್ಲೋಬಲ್ ಅಲಯನ್ಸ್ ಫಾರ್ ಹ್ಯೂಮನ್ ರೈಟ್ಸ್ ರಾಜಸ್ತಾನ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದು, ಸಂಘಟನೆಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪ್ರದೀಪ್ ನಂದ್ರಜೊಗ್ ಮತ್ತು ಡಿ.ಸಿ.ಸೊಮಾನಿ ಅವರನ್ನೊಳಗೊಂಡ ನ್ಯಾಯಪೀಠ, ಕೇಂದ್ರ ಸರ್ಕಾರ, ಪ್ರಧಾನ ಕಾರ್ಯದರ್ಶಿ ಮತ್ತು ಕೇಂದ್ರ ಆರೋಗ್ಯ ಕಾರ್ಯದರ್ಶಿಗಳಿಗೆ ನೊಟೀಸ್ ಜಾರಿ ಮಾಡಿದೆ.

ದೇಶದ ಜನಸಂಖ್ಯೆಯು ರಭಸದಿಂದ ಹೆಚ್ಚುತ್ತಿದೆ. ಆದ್ದರಿಂದ ಜನರಿಗೆ ಗರ್ಭನಿರೋಧಕಗಳ ಬಗ್ಗೆ ಅರಿವು ಮೂಡಿಸಬೇಕೆಂದು ಅರ್ಜಿದಾರರು ತಿಳಿಸಿದ್ದಾರೆ.

ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯೊಳಗೆ ಜಾಹಿರಾತು ಪ್ರಸಾರವಾದರೆ ಅದು ನಿರ್ದಿಷ್ಟ ಜನರನ್ನು ತಲುಪುವುದಿಲ್ಲ.
ದೇಶದಲ್ಲಿ ಏಡ್ಸ್ ಕೇಸುಗಳು ಕೂಡ ಹೆಚ್ಚಾಗುತ್ತಿದ್ದು ಕಾಂಡೊಮ್ ಜಾಹಿರಾತುಗಳು ದಿನವಿಡೀ ಪ್ರಸಾರವಾದರೆ ಜನರಿಗೆ ಅರಿವು ಮೂಡಿ ರೋಗವನ್ನು ತಡೆಗಟ್ಟಬಹುದು ಅರ್ಜಿಯಲ್ಲಿ ತಿಳಿಸಲಾಗಿದೆ.

ಹಗಲು ಹೊತ್ತಿನಲ್ಲಿ ಕಾಂಡೊಮ್ ಜಾಹೀರಾತುಗಳನ್ನು ಏಕೆ ಪ್ರಸಾರ ಮಾಡಬಾರದೆಂದು ಎಂದು 8 ವಾರಗಳೊಳಗೆ ಉತ್ತರಿಸುವಂತೆ ಸೂಕ್ತ ಕಾರಣ ನೀಡಲು ಸಂಬಂಧಪಟ್ಟ ಇಲಾಖೆಗೆ ನ್ಯಾಯಾಲಯ ಆದೇಶ ನೀಡಿದೆ.

Leave a Reply