ಕಾಗದವನ್ನು ಮರದಿಂದ ತಯಾರಿಸಲಾಗುತ್ತದೆ. ಮರಗಳನ್ನು ಕತ್ತರಿಸಿ ಅವುಗಳನ್ನು ಪೇಪರ್ ಮಿಲ್‍ಗಳಿಗೆ ಕೊಂಡೊಯ್ಯಲಾಗುತ್ತದೆ. ಮಿಲ್‍ಗಳಲ್ಲಿ ಮರದ ಕಾಂಡವನ್ನು ಸಣ್ಣ ಸಣ್ಣ ತುಂಡುಗಳಾಗಿ ಬೇರ್ಪಡಿಸಲಾಗುತ್ತದೆ. ನಂತರ ಈ ತುಂಡುಗಳನ್ನು ನೀರಿನಲ್ಲಿ ಮುಳುಗಿಸಿ ಕುದಿಸಲಾಗುತ್ತದೆ ಮತ್ತು ಅದನ್ನು ಮೆತ್ತಗಿನ ದ್ರವ್ಯವಾಗಿ ಪರಿವರ್ತಿಸಲಾಗುತ್ತದೆ. ಈ ಮೆತ್ತಗಿನ ದ್ರವ್ಯವನ್ನು ಹೊಯ್ದಾಗ ಅದು ಹಸಿ ಪೇಪರ್ ಆಗಿ ಮಾರ್ಪಡುತ್ತದೆ. ಈ ಪೇಪರನ್ನು ಒತ್ತಿ ನಂತರ ಅದನ್ನು ಒಣಗಿಸಿ (ಹಾಳೆ) ಶೀಟ್‍ಗಳ ರೂಪದಲ್ಲಿ ಕತ್ತರಿಸಲಾಗುತ್ತದೆ.

Leave a Reply