ನವದೆಹಲಿ: ಜಗತ್ತಿನಾದ್ಯಂತ ಅಲ್ಲೋಲಕಲ್ಲೋಲ ಎಬ್ಬಿಸಿರುವ ಕೊರೊನಾವೈರಾಣು ಸೋಂಕಿಗೆ ಕೊಲ್ಕತಾದಲ್ಲಿ 55 ವರ್ಷದ ವ್ಯಕ್ತಿಯೊಬ್ಬರು ಬಲಿಯಾಗಿದ್ದು, ಭಾರತದಲ್ಲಿ ಮೃತಪಟ್ಟವರ ಸಂಖ್ಯೆ ಎಂಟಕ್ಕೆ ಏರಿದೆ. ಕೊಲ್ಕತಾದ ಎಎಂಆರ್‌ಐ ಆಸ್ಪತ್ರೆ ಅಧಿಕಾರಿಗಳ ಪ್ರಕಾರ, ಮೃತ ವ್ಯಕ್ತಿ ಇಟಲಿಗೆ ಹೋಗಿ ಬಂದಿದ್ದು, ಕೊರೊನಾ ಸೋಂಕು ಇರುವುದು ಕಳೆದ ವಾರ ದೃಢಪಟ್ಟಿತ್ತು. ಆಗಿನಿಂದಲೂ ಅವರು ಅವರು ಹೃದ್ರೋಗದಿಂದ ನರಳುತ್ತಿದ್ದರು.

ಕೇರಳದಲ್ಲಿ ಹೊಸದಾಗಿ 28 ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 92ಕ್ಕೆರಿದೆ. ಇದರಿಂದಾಗಿ ಕೇರಳದಲ್ಲಿಯೇ ಅತಿ ಹೆಚ್ಚು ಜನರಿಗೆ ಸೋಂಕು ದೃಢಪಟ್ಟಂತಾಗಿದೆ. ಎರಡನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 91 ಜನರಿಗೆ ಸೋಂಕು ದೃಢಪಟ್ಟಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 478ಕ್ಕೆ ಏರಿದೆ. ದೆಹಲಿ ಕಾರಾಗೃಹವಾಸಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಬಂಧಿಗಳಿಗೆ ವಿಶೇಷ ಪೆರೋಲ್ ನೀಡುವುದಾಗಿ ದೆಹಲಿ ಸರ್ಕಾರ ತಿಳಿಸಿದೆ. ಇದಕ್ಕಾಗಿ ಕಾನೂನಿನಲ್ಲಿ ಕೆಲವೊಂದು ತಿದ್ದುಪಡಿಗಳನ್ನು ಮಾಡಲಾಗುವುದು ಎಂದು ದೆಹಲಿ ಸರ್ಕಾರದ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಸ್ಪೇನ್ ನಲ್ಲಿ ಒಂದೇ ದಿನ ಹೊಸದಾಗಿ 4321 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 33 ಸಾವಿರ ದಾಟಿದೆ. ಒಂದೇ ದಿನದಲ್ಲಿ 410 ಜನ ಸೋಂಕಿಗೆ ಬಲಿಯಾಗಿದ್ದು, ಒಟ್ಟು ಸಾವನ್ನಪ್ಪಿದವರ ಸಂಖ್ಯೆ 2182ಕ್ಕೆ ಏರಿದೆ. ಇಟಲಿಯಲ್ಲಿ ಸೋಂಕಿತರ ಸಂಖ್ಯೆ 60 ಸಾವಿರ ದಾಟಿದ್ದು, ಬಲಿಯಾದವರ ಸಂಖ್ಯೆ 5476ಕ್ಕೆ ಮುಟ್ಟಿದೆ. ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 35,075ಕ್ಕೆ ತಲುಪಿದ್ದರೂ ಸಾವನ್ನಪ್ಪಿದವರ ಸಂಖ್ಯೆ ಕೇವಲ 458 ಎಂಬುದು ಗಮನಾರ್ಹ.

LEAVE A REPLY

Please enter your comment!
Please enter your name here