ನವದೆಹಲಿ: ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಇಟಲಿಯಲ್ಲಿ ಮದುವೆಯಾಗಿದ್ದಾರೆ. ಇದಾದ ಒಂದೆರಡು ದಿನದಲ್ಲೇ ಬಿಜೆಪಿ ನಾಯಕರೊಬ್ಬರು ವಿಶ್ವ ಕ್ರಿಕೆಟ್ ಕಂಡ ರೆಕಾರ್ಡ್ ಬ್ರೇಕರ್, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದೇಶ ಭಕ್ತನಲ್ಲ ಎಂಬ ಬೆಜವಾಬ್ದಾರಿ ಹೇಳಿಕೆಯನ್ನು ನೀಡುವ ಮೂಲಕ ಇದೀಗ ಕೊಹ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಭಾರತದಲ್ಲಿ ಹಣ ಹಾಗೂ ಹೆಸರು ಗಳಿಸಿಕೊಂಡಿರುವ ವಿರಾಟ್ ಕೊಹ್ಲಿ ವಿದೇಶದಲ್ಲಿ ಏಕೆ ಮದುವೆಯಾಗಿದ್ದಾರೆ ಎಂದು ಮಧ್ಯಪ್ರದೇಶದ ಬಿಜೆಪಿ ಶಾಸಕ ಪನ್ನಾಲಾಲ್ ಶಕ್ಯಾ ಕಿಡಿಕಾರಿದ್ದಾರೆ.
ರಾಮ, ಕೃಷ್ಣರಂಥವರೇ ಭಾರತದಲ್ಲಿ ವಿವಾಹವಾಗಿದ್ದಾರೆ ಯಾರೂ ಕೂಡ ವಿದೇಶಕ್ಕೆ ಹೋಗಿ ಮದುವೆಯಾಗಿಲ್ಲ. ಆದರೆ ಕೊಹ್ಲಿ ಮಾತ್ರ ಭಾರತದಲ್ಲಿ ಹಣ, ಹೆಸರು ಮಾಡಿಕೊಂಡು ಪರದೇಶದಲ್ಲಿ ಮದುವೆಯಾಗಿದ್ದಾರೆ ಎಂದು ಬಿಜೆಪಿ ಶಾಸಕ ವಾಗ್ದಾಳಿ ನಡೆಸಿದ್ದಾರೆ. ಕೊಹ್ಲಿ ವಿರುದ್ಧ ಬಿಜೆಪಿ ಶಾಸಕ ಮಾಡಿರುವ ಪ್ರಶ್ನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ಚರ್ಚೆಯ ಜೊತೆಗೆ ಟ್ರೋಲ್ ಕೂಡ ಆಗುತ್ತಿದೆ.