ಪಾಟ್ನ : ಕೊರೊನಾ ಹಿನ್ನೆಲೆಯಲ್ಲಿ ಪರ ಊರಿನಿಂದ ಊರಿಗೆ ಬಂದವರ ವಿವರ ಅಧಿಕಾರಿಗಳಿಗೆ ನೀಡಿದ ಯುವಕನ ದಾರುಣ ಅಂತ್ಯವಾವಾಗಿದೆ. ಬಿಹಾರದ 24 ವರ್ಷದ ಬಬ್ಲು ಕುಮಾರ್ ಎಂಬವರು ದುಷ್ಕರ್ಮಿಗಳ ಹಲ್ಲೆಯಿಂದ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಸೀತಾಮಾರ್ಗಿ ಜಿಲ್ಲೆಯ ಮಧೂಲ್ ಗ್ರಾಮದಲ್ಲಿ ಘಟನೆ ನಡೆದಿದೆ. ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮಧೂಲ್ ಗ್ರಾಮದ ಮುನ್ನಾ ಮಹತೊ, ಸುಧೀರ್ ಕುಮಾರ್ ಅವರು ಮಹಾರಾಷ್ಟ್ರದಿಂದ ಊರಿಗೆ ಮರಳಿದ್ದರು. ಇದನ್ನು ಬಬ್ಲು ಅಧಿಕಾರಿಗಳಿಗೆ ತಿಳಿಸಿದರು.

ಮಾರ್ಚ್ 25ಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್ ತಂಡ ಮನೆಗೆ ಬಂದಿದ್ದು ಇವರ ಕುಟುಂಬವನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ನಂತರ ಮನೆಯಲ್ಲಿ ನಿಗಾದಲ್ಲಿರಿಸಲಾಗಿತ್ತು. ಇದರ ಬೆನ್ನಿಗೆ ಸೊಮವಾರ ಬಬ್ಲು ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಗಂಭೀರ ಗಾಯಗೊಂಡ ಬಬ್ಲುರನ್ನು ಮುಝಪ್ಫರ್‍ಪುರಿಯ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅವರು ಬದುಕುಳಿಯಲಿಲ್ಲ. ಮುನ್ನ ಮತ್ತು ಸುಧೀರ್ ಗ್ರಾಮಕ್ಕೆ ಬಂದ ವಿವರ ನೀಡಿದ್ದಕ್ಕಾಗಿ ದುಷ್ಕರ್ಮಿಗಳು ಹೊಡೆದಿದ್ದಾರೆ ಎಂದು ಬಬ್ಲುರ ಸಹೋದರ ಗುಡ್ಲು ಆರೋಪಿಸಿದ್ದಾರೆ. ಗುಡ್ಲು ಹೇಳಿಕೆಯ ಆಧಾರದಲ್ಲಿ ಪೊಲೀಸರು ಆರು ಮಂದಿಯ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಕೆಲಸ ಮಾಡುತ್ತಿದ್ದ ಬಬ್ಲೂ ಎರಡು ದಿವಸ ಹಿಂದೆ ಊರಿಗೆ ಊರಿಗೆ ಬಂದಿದ್ದರು.

LEAVE A REPLY

Please enter your comment!
Please enter your name here