ಗೌರವ್ ಕಪೂರ್ ಆಯೋಜಿಸಿದ್ದ ಯೂಟ್ಯೂಬ್ ಶೋ “ಬ್ರೇಕ್ಫಾಸ್ಟ್ ವಿತ್ ಚಾಂಪಿಯನ್ಸ್” ಭಾರತೀಯ ಕ್ರಿಕೆಟ್ ಡ್ರೆಸ್ಸಿಂಗ್ ಕೊಠಡಿಯ ಕುರಿತು ನಮಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತಿದೆ.
ಇತ್ತೀಚಿನ ಶೋನಲ್ಲಿ, ಸುರೇಶ್ ರೈನಾ ಅತಿಥಿಯಾಗಿದ್ದರು. ಅವರು ತಾನು ಭಾರತೀಯ ತಂಡದೊಂದಿಗೆ ಕಳೆದ ಸಮಯ, ತಾನು ತಂಡಕ್ಕೆ ವಾಪಸಾಗುವ ಕುರಿತು ಮತ್ತು ತನ್ನ ಇಂದಿನ ಆಗುಹೋಗುಗಳ ಬಗ್ಗೆ ಮಾತನಾಡಿದರು.
ಎಂಎಸ್ ಧೋನಿಯವರ ದೀರ್ಘಕಾಲದ ಸಹಯೋಗಿಯಾಗಿದ್ದ ರೈನಾ, ‘ಕ್ಯಾಪ್ಟನ್ ಕೂಲ್’ ಎಂದು ಖ್ಯಾತಿಗಳಿಸಿರುವ ತಂಡದ ನಾಯಕ ಎಂ.ಎಸ್. ಧೋನಿಗೂ ಕೋಪ ಬರುತ್ತದೆ ಎಂದು ಹೇಳಿದ್ದು, ಕ್ಯಾಮರಾಗಳು ಚಾಲನೆಯಲ್ಲಿ ಇರುವಾಗ ಓವರ್‌ಗಳ ನಡುವೆ ವಿರಾಮಕ್ಕಾಗಿ ಧೋನಿ ಕಾಯುತ್ತಿರುತ್ತಾರೆ. ನಂತರ ಅವರ ಭಾವನೆಗಳನ್ನು ಪ್ರಕಟಿಸುತ್ತಾರೆ ಎಂದು ರೌನಾ ತಿಳಿಸಿದರು.
“ಅವರು ಕೋಪಗೊಳ್ಳುತ್ತಾರೆ, ನಿಮಗೆ ಕಾಣುವುದಿಲ್ಲ. ವಿರಾಮದ ವೇಳೆ ಜಾಹೀರಾತುಗಳು ಪ್ರಸಾರವಾಗುತ್ತಿದ್ದಂತೆ, ‘ತು ಸುಧರ್ ಜಾ ಎಂದು ಹೇಳುತ್ತಾರೆ (ನೀನು ಸರಿಯಾಗು)’ ಎಂದು ರೈನಾ ಹೇಳಿದ್ದಾರೆ.
ರೈನಾ ಹೇಳುತ್ತಾರೆ, “ನಾವು ಪಾಕಿಸ್ತಾನದ ವಿರುದ್ಧ ಆಡುತ್ತಿದ್ದರೆ ಉಮರ್ ಅಕ್ಮಲ್ ಬ್ಯಾಟಿಂಗ್ ಮಾಡುತ್ತಿದ್ದರು. ನಾನು ಅವನನ್ನು ಪ್ರಚೋದಿಸುತ್ತಿರುವೆ ಎಂದು ದೋನಿಯವರಲ್ಲಿ ಉಮರ್ ದೂರು ನೀಡಿದರು. ದೋನಿ ನನ್ನಲ್ಲಿ ಈ ಬಗ್ಗೆ ಕೇಳಿದಾಗ,ನಾನು ಉಮರ್ ನೊಂದಿಗೆ ಗುರಿಯನ್ನು ಬೆನ್ನಟ್ಟಲು ಕೆಲವು ರನ್ಗಳನ್ನು ಗಳಿಸು ಎಂದೆ”
ಇದಕ್ಕೆ ದೋನಿಯವರ ಪ್ರತಿಕ್ರಿಯೆ ಅನಿರೀಕ್ಷಿತವಾಗಿತ್ತು, ರೈನಾರವರನ್ನು ಶಾಂತವಾಗಿರಲು ಹೇಳುವ ಬದಲು ಇನ್ನಷ್ಟು ಪ್ರಚೋದಿಸು ಎಂದು ಸಲಹೆ ನೀಡಿದರು.
ರೈನಾರವರ ಮಾತಿನಲ್ಲಿ ಹೇಳುವುದಾದರೆ “ಧೋನಿ ಹೇಳಿದರು, ‘ಫೋಡ್ ಡಾಲ್ ಉಸ್ಕೋ”