ಎ.ಆರ್. ಫಾರೂಕ್
ಆರನೆ ಬಾರಿ ಬಿಜೆಪಿಗೆದಿದ್ದರೂ ಈ ಬಾರಿ ಅದರ ಗೆಲುವು ಹೇಳಿಕೊಳ್ಳುವಷ್ಟು ಹೊಳೆದಿಲ್ಲ. ಬಿಜೆಪಿಯ ಪರ ಪ್ರಧಾನಿ ಚುನಾವಣೆಯ ಪ್ರಚಾರದ ವೇಳೆ ಕೊನೆಯದಾಗಿ ಪಾಕಿಸ್ತಾನಿ ಕಾಂಗ್ರೆಸ್ ಎನ್ನುವ ಕಾರ್ಡನ್ನು ಆಡಿದ್ದು ಈವಿಜಯದಲ್ಲಿ ಕೊನೆಯ ಅಡಿಗೆರೆಯಾಯಿತೇ ಎನ್ನುವುದು ಒಂದು ದಟ್ಟ ಅನುಮಾನವಾಗಿ ಉಳಿಯಬೇಕಿಲ್ಲ. ಕೋಮುಭಾವನೆ ಕೆರಳಿಸಿದಾಗಲೆಲ್ಲ ಬಿಜೆಪಿ ಗೆದ್ದಿದೆ ಎನ್ನುವುದು ಈಗ ಇತಿಹಾಸದ ಖಾತೆಯಿಂದಲೂ ಪಡೆಯಬಹುದು. ಆದರೆ ಪಾಟೀದಾರ್ ಅನಾಮತ್ ಆಂದೋಲನ್ ಬಿಜೆಪಿಗೆ ಸಾಕಷ್ಟು ಹಾನಿಯಾನ್ನು ಮಾಡಿದೆ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಸಂಪೂರ್ಣ ಗೊಂಡಿಲ್ಲ. ಹಾಗಿದ್ದರೂ ಚುನಾವಣೆಯಲ್ಲಿಮತಯಂತ್ರದ ಪಾತ್ರವಿರುವುದನ್ನು ಕೂಡಾ ಅಲ್ಲಗೆಳೆಯಲು ಸಾಧ್ಯವಿಲ್ಲ. ಯಾಕೆಂದರೆ ಮಧ್ಯಗುಜರಾತ್ ಮೋದಿಯನ್ನು ಎತ್ತಿನಿಲ್ಲಿಸಿದೆ. ಪಾಟಿದಾರ್ ನಾಯಕ ಹಾರ್ದಿಕ್ ಕಾಂಗ್ರೆಸ್ಗೆ ಬೆಂಬಲ ನೀಡಿದ್ದರಿಂದ ಹಿಂದುಳಿದ ವರ್ಗದ ಅಲ್ಫೇಶ್,ದಲಿತನಾಯ ಜಿಗ್ನೇಶ್ ಒಟ್ಟಿಗೆ ನಿಂತದ್ದರಿಂದ ಕಳೆದ ಚುನಾವಣೆಯಲ್ಲಿ 55 ಸೀಟುಗಳನ್ನಷ್ಟೆ ಪಡೆದಿದ್ದ ಕಾಂಗ್ರೆಸ್ ಈ ಸಲ ಎಪ್ಪತ್ತೂ ಸಂಖ್ಯೆಯನ್ನು ದಾಟಿನಿಂತಿದೆ. ಹೀಗಾಗಿ ಪಟೇಲರು ಒಟ್ಟಾಗಿ ಕಾಂಗ್ರೆಸ್ಗೆ ಎಲ್ಲ ಮತಗಳನ್ನು ಹಾಕಿಲ್ಲ ಎನಬಹುದಾದರೂ ಹೆಚ್ಚಿನವರು ಹಾಕಿದ್ದಾರೆ. ಹಾಗೆ ಮಾಡುವುದರಲ್ಲಿ ಹಾರ್ದಿಕ್ ಗೆದ್ದಿದ್ದಾರೆ. ಅಲ್ಪೇಶ್ ಮತ್ತು ಜಿಗ್ನೇಶ್ ಹಿಂದುಳಿದ ದಲಿತ ವೋಟುಗಳನ್ನು ಕಾಂಗ್ರೆಸ್ ನತ್ತ ಸಂಪೂರ್ಣ ತರುವಲ್ಲಿಯಶಸ್ವಿಯಾಗಿಲ್ಲ ನಿಜ ಆದರೆ ಮೋದಿ ಆಡಳಿತ ಕಾಲದಲ್ಲಿ ಕಾಂಗ್ರೆಸ್ಸಿನಿಂದ ದೂರವಾದ ಈ ಎರಡು ವಿಭಾಗಗಳನ್ನು ಹತ್ತಿರ ತರಲು ಅವರಿಬ್ಬರೂ ಯಶಸ್ವಿಯಾಗಿದ್ದಾರೆ ಎನ್ನಬಹುದು. ಕಾಂಗ್ರೆಸ್ಸಿನ ಘಟಾನುಘಟಿ ನಾಯಕರಿಗಿಂತ ಈ ಮೂವರ ಕೈಚಳ ಕಾಂಗ್ರೆಸ್ ಸೀಟುಗಳ ಸಂಖ್ಯೆ ಹೆಚ್ಚಳ ದಲ್ಲಿ ಎದ್ದು ಕಾಣುತ್ತಿದೆ.
ಸೌರಾಷ್ಟ್ರ, ಉತ್ತರ ಗುಜರಾತ್‍ನಲ್ಲಿ ಕಾಂಗ್ರೆಸ್‍ಗೆ ಭಾರಿ ಮುನ್ನಡೆ ಸಿಕ್ಕಿದ್ದು ಹೀಗಾಗಿ 2012ರಲ್ಲಿ ಬಿಜೆಪಿಯ ಜೊತೆ ನಿಂತ ಉತ್ತರ ಗುಜರಾತ್ ಪಾಟಿದಾರರು ರೈತರು ಬಿಜೆಪಿಯ ಕೈಹಿಡಿಯದೆ ಕಾಂಗ್ರೆಸ್ಸಿನ ಕೈಹಿಡಿದಿರುವುದನ್ನು ಇದುತೋರಿಸುತ್ತಿದೆ. ಮುಖ್ಯವಾಗಿ ಗ್ರಾಮೀಣ ಗುಜರಾತ್ ಕಾಂಗ್ರೆಸ್ಸಿನತ್ತ ಮುಖಮಾಡಿದ್ದರೆ, ನಗರಗಳು ಬಿಜೆಪಿಯನ್ನು ಇನ್ನೂ ತನ್ನ ಬಗಲಿನಿಂದ ಬಿಟ್ಟುಕೊಟ್ಟಿಲ್ಲ. ಸೌರಾಷ್ಟ್ರದಲ್ಲಿ 2012ರಲ್ಲಿ ಬಿಜೆಪಿಗೆ 48 ಸಿಟುಗಳಿದ್ದರೆ ಕಾಂಗ್ರೆಸ್‍ಗೆ 15 ಸೀಟುಗಳಿದ್ದವು. ಉಳಿದವರಿಗೆ 3ಸೀಟುಗಳು. ಈ ಬಾರಿ ಇದು ಉಲ್ಟಾ ಆಗಿದೆ. ಕೊನೆಯಾಗುವಾಗ ಇಲ್ಲಿ ಕಾಂಗ್ರೆಸ್ಸಿಗೆ ಮೂವತ್ತು ಸೀಟು ಸಿಗಬಹುದೆನ್ನುವ ಲೆಕ್ಕಇದೆ.
ಹಿಂದುಳಿದವರು, ದಲಿತರು ಮತ್ತು ಪಾಟಿದಾರರು ಕಾಂಗ್ರೆಸ್ಸಿನತ್ತ ಮುಖಮಾಡಿದ್ದನ್ನು ಈಚುನಾವಣೆ ತೋರಿಸಿದ್ದರೆ, ಮುಸ್ಲಿಮರು ಎಂದಿನ ಮತಯಂತ್ರದಂತೆ ಕಾಂಗ್ರೆಸ್ ಪರ ಬಳಕೆಯಾಗಿಲ್ಲ. ಹಾಗಾದಂತೆ ನೋಡಿಕೊಳ್ಳಲು ಕಾಂಗ್ರೆಸ್ ಯಶಸ್ವಿಯಾಗಿಲ್ಲ. ಹಾಗಾಗದಂತೆ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಅಂದರೆ ಮುಸ್ಲಿಮರ ಮತಗಳು ಒಂದೋ ವಿಭಜನೆಯಾಗಿದೆ ಅಥವಾ ಅವರ ನಾಯಕರಲ್ಲಿನ ಅನೈಕ್ಯ ಬಿಜೆಪಿಗೆ ವರದಾನವಾಯಿತೋ . ಅಂತೂ ಕಾಂಗ್ರೆಸ್ಸಿಗೆ ಮುಸ್ಲಿಮರ ವೋಟುಗಳನ್ನು ಗಳಿಸಲು ಸಾಧ್ಯವಾಗಿಲ್ಲ ಎನ್ನುವುದು ಸತ್ಯವಾಗಿದೆ. ಮುಸ್ಲಿಮರ ಕಡೆಯಿಂದಲೂ ಈಗ ಪಕ್ಷಗಳು ಹುಟ್ಟಿ ಬೆಳೆದು ನಿಂತುದು ಕಾಂಗ್ರೆಸ್ಸಿಗೆ ಅನಾನುಕೂಲವನ್ನೇ ಸೃಷ್ಟಿಸಿದೆ. ಆದರೂ ಉತ್ತರ ಗುಜರಾತ್‍ನಲ್ಲಿ ಕಾಂಗ್ರೆಸ್ಸ್‍ಗೆ ಎಂದಿನಂತೆ ಹೆಚ್ಚು ಸೀಟು ಸಿಕ್ಕಿದೆ. ಇನ್ನೊಮ್ಮೆ ಹೇಳುವುದಾದರೆ ಮಧ್ಯ-ದಕ್ಷಿಣ ಗುಜರಾತ್‍ನಲ್ಲಿ ಗುಜರಾತಿಗಳು ಬಿಜೆಪಿಯ ಜೊತೆಗೆ ನಿಂತರು. ಎಷ್ಟೇ ಇವಿಎಂ ಕೈಕೊಟ್ಟರು ಪಿಕ್ಷಿಂಗ್ ಇದ್ದರೂ ಅಂತಿಮ ಫಲಿತಾಂಶ ಫಲಿತಾಂಶವೇ. ಹೀಗಾಗಿ ಬಿಜೆಪಿಗೆಲು ಸುಲಭವೂ ಆಗಿದೆ.
ಏನಿದ್ದರೂ,ಗುಜರಾತ್ ಚುನಾವಣೆಯ ಫಲಿತಾಂಶದಲ್ಲಿ ನಿರ್ಣಾಯಕ ರಾಜಕೀಯ ಗೆಲುವು ಹಾರ್ದಿಕ್ ಪಟೇಲ್‍ಗೆ ಅವರ ಪಾಟಿದಾರ್ ಆಂದೋಲನ್ ಸಮಿತಿಗೆ ಸಿಕ್ಕಿದೆ ಎನ್ನಬಹುದು. ಚುನಾವಣಾ ಪ್ರಚಾರದ ವೇಳೆ ಭಾರೀ ಸಂಖ್ಯೆಯಲ್ಲಿ ಜನರು ಪಟೇಲ್‍ರ ರ್ಯಾಲಿಗೆ ಹರಿದು ಬಂದಿದ್ದರು. ರಾಜ್‍ಕೋಟ್ ವಿಧಾನಸಭಾ ಕ್ಷೇತ್ರದಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿಯಲ್ಲಿ ಹಾರ್ದಿಕ್ ಆತಂಕು ವುಟ್ಟಿಸಿದ್ದರು.
ಚುನಾವಣೆ ಘೋಷಿಸುವಾಗ 150ಕ್ಕು ಹೆಚ್ಚು ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಮರಳುವನಿರೀಕ್ಷೆ ಬಿಜೆಪಿಗಿತ್ತು. ಅನಾಯಾಸವಾಗಿ ಗೆಲ್ಲುವ ಕನಸ್ಸನ್ನು ಬಿಜೆಪಿ ಕಂಡಿತ್ತು. ಅದರೆ, ಅದಕ್ಕೆ ಬದಲಾಗಿ ಒಂದು ಹಂತದಲ್ಲಿ ಭಾರೀಪೈಪೋಟಿಯನ್ನು ಬಿಜೆಪಿ ಎದುರಿಸುವಂತಾಗಿದೆ. ಇದರಲ್ಲಿ ಹಾರ್ದಿಕ್ ಪಟೇಲ್‍ರ ಪಾಟಿದಾರ್ ಸಮಿತಿಯ ಪಾಲು ನಿರ್ಣಾಯಕವಾಗಿದೆ. ಸೌರಾಷ್ಟ್ರ, ಕಚ್ ಮೊದಲಾದ ಕಡೆಗಳಲ್ಲಿ ಕಾಂಗ್ರೆಸ್‍ನ ಮುನ್ನಡೆಗೆ ಹಾರ್ದಿಕ್ ಪಟೇಲ್ ಕಾರಣವಾಗಿದ್ದಾರೆ.