ಊರಿಗೊಂದು ದಾರಿಯಾಗಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಒಂದು ಬೃಹತ್ ಬೆಟ್ಟವನ್ನೇ ಕೊರೆದ ದಶರಥ ಮಾಂಝಿಯ ಕಥೆಯನ್ನು ಬಹುತೇಕ ಜನರು ಕೇಳಿರಬಹುದು. ಈ ಕುರಿತಾದಂತೆ ನವಾಝುದ್ದೀನ್ ಸಿದ್ದೀಕಿ ಅಭಿನಯದ ಚಿತ್ರವೂ ಬಿಡುಗಡೆಯಾಗಿತ್ತು. ಇದೀಗ ವ್ಯಕ್ತಿಯೊಬ್ಬ ತನ್ನ ಗ್ರಾಮಸ್ಥರ ದಾಹವನ್ನು ನೀಗಿಸಲು 27 ವರ್ಷಗಳ ಕಾಲ ಸತತವಾಗಿ ಕೆರೆಯೊಂದನ್ನು ತೋಡಿದ ಘಟನೆಯು ಛತ್ತೀಸ್ ಘಡದಲ್ಲಿ ನಡೆದಿದೆ.

ಶ್ಯಾಮ್ ಲಾಲ್ ಎಂಬ ಬುಡಕಟ್ಟು ಜನಾಂಗದ ಬಾಲಕ ತನಗೆ 15 ವರ್ಷವಿರುವಾಗ ತನ್ನ ಊರಿನಲ್ಲಿದ್ದ ಜನರು ಮತ್ತು ಪ್ರಾಣಿಗಳು ನೀರಿಲ್ಲದೇ ಚಡಪಡಿಸುವುದನ್ನು ಕಂಡು ಕೆರೆ ತೋಡಲು ತೀರ್ಮಾನಿಸಿದ. ಒಂದು ಜಾಗವನ್ನು ತಾನೇ ಆಯ್ಕೆ ಮಾಡಿಕೊಂಡು ದಿನಂಪ್ರತೀ ಕೆರೆ ತೋಡಲು ಆರಂಭಿಸಿದ. ಆದರೆ, ಈತನಿಗೆ ಗ್ರಾಮಸ್ಥರು ಯಾರೂ ಸಹಾಯ ಮಾಡದೇ, ಈತನನ್ನು ನೋಡಿ ನಗಲು ಪ್ರಾರಂಭಿಸಿದರು. ಇದೀಗ ಶ್ಯಾಮ್ ಲಾಲ್ ಗೆ 42 ವರ್ಷ. ಆತ ತೋಡಿದ ಕೆರೆಯು ತುಂಬಿ ತುಳುಕುತ್ತಿದೆ. ಪ್ರಾಣಿಗಳು, ಗ್ರಾಮಸ್ಥರು ಮನಸೋ ಇಚ್ಛೆ ನೀರು ಬಳಕೆ ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ಈತನಿಗೆ ಸಹಾಯ ಮಾಡದ ವ್ಯಕ್ತಿಗಳು ಇಂದು ಆತನ ಬಳಿ ಬರುತ್ತಿದ್ದಾರೆ. ಹಲವು ಪ್ರಶಸ್ತಿಗಳೂ ಶ್ಯಾಮ್ ಲಾಲ್ ಗೆ ಸಂದಿವೆ. ತನ್ನ ಈ ಶ್ರಮದ ಕುರಿತು ನನಗೆ ಹೆಮ್ಮೆಯಿದೆ ಎಂದು ನಗುತ್ತಲೇ ಹೇಳುತ್ತಾನೆ ಶ್ಯಾಮ್ ಲಾಲ್.

Leave a Reply