ಶಿಷ್ಯ: ಜ್ಞಾನ ವೃದ್ಧಿಸಲು ಅತ್ಯಂತ ಸುಲಭದ ಮಾರ್ಗ ಯಾವುದು ಗುರುಗಳೇ?
(ಸಂತ ತನ್ನ ಎರಡೂ ಕೈಗಳಲ್ಲಿ ಬೊಗಸೆ ತುಂಬಾ ಮರಳು ಎತ್ತಿದರು. ಮುಷ್ಟಿ ಬಿಗಿಗೊಳಿಸುತ್ತಾ ಹೋದರು. ಮರಳು ಎಲ್ಲಾ ಕೆಳಗೆ ಸುರಿಯಿತು. ಕೊನೆಗೆ ತನ್ನ ಎಲ್ಲಾ ಶಕ್ತಿಯನ್ನು ಉಪಯೋಗಿಸಿ ಒಂದು ಕೈ ಮುಷ್ಠಿ ಮಾತ್ರ ಗಟ್ಟಿಯಾಗಿ ಹಿಡಿದರು. ಈಗ ಅವರ ಕೈಯಲ್ಲಿ ಸ್ವಲ್ಪವೇ ಮರಳು ಇತ್ತು)
ಸಂತ : ಜ್ಞಾನ ಈ ಮರಳಿನ ಹಾಗೆ, ನಮ್ಮ ಮನಸ್ಸನ್ನು ಎಷ್ಟು ಹಗುರ ಮತ್ತು ವಿಶಾಲವಾಗಿ ಇಡುತ್ತೇವೆ ಅಷ್ಟು ಜಾಸ್ತಿ ಜ್ಞಾನ ಸಂಪಾದಿಸಬಹುದು.
ಕೇಳು ಮಗುವೇ, ವಿನಯವೇ ವಿದ್ಯೆ ಯ ಹೆಗ್ಗುರು ಎಂದು ಹಿಂದೊಮ್ಮೆ ಹೇಳಿದ ನೆನಪು…