ಕಾಳಹಂಡಿ (ಒಡಿಶಾ): ಒಡಿಶಾದ “ಅಸಹಾಯಕ” ಬುಡಕಟ್ಟು ವ್ಯಕ್ತಿ ಡಾನಾ ಮಜಿಯವರು ತನ್ನ ಪತ್ನಿಯ ಮೃತ ದೇಹವನ್ನು ಭುಜಗಳ ಮೇಲೆ ಹೊತ್ತುಕೊಂಡು 10 ಕಿ.ಮೀ ನಡೆದುಕೊಂಡು ಹೋದ ವಿಡಿಯೋ ಇಡೀ ದೇಶವನ್ನು ಬೆಚ್ಚಿಬೀಳಿಸಿತ್ತು
ಆ ಬಳಿಕ ಬಹ್ರೇನ್ ಪ್ರಧಾನ ಮಂತ್ರಿ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾರಿಂದ 9 ಲಕ್ಷ ರೂಪಾಯಿ ಸೇರಿದಂತೆ ದಾನಿಗಳಿಂದ ಆರ್ಥಿಕ ನೆರವು ಪಡೆದ ಮಜೀ ಈಗ ಸೈಕಲ್ ಮತ್ತು ಮನೆಗ ಹೊಂದಿದ್ದಾರೆ.
ಈಗ ಅವರು ಮರುಮದುವೆಯಾಗಿದ್ದು, ಆ ಘಟನೆಯ ಬಳಿಕ ಕಲಾಹಂಡಿಯ ಅವರ ನಿವಾಸಕ್ಕೆ ನೆರವು ಹರಿದು ಬಂದಿತ್ತು. ಪ್ರಧಾನ್ ಮಂತ್ರಿ ಗ್ರಾಮೀಣ ವಿಕಾಸ್ ಯೋಜನೆಯಡಿಯಲ್ಲಿ ಒಂದು ಮನೆಯನ್ನು ಅವರಿಗೆ ನೀಡಲಾಗಿದೆ. ಅವರಿಗೆ ಈ ಮುಂಚೆ ಅವರಲ್ಲಿ ಒಂದು ಬ್ಯಾಂಕ್ ಖಾತೆ ಇರಲಿಲ್ಲ. ಆದರೆ ಈಗ ಅವರಲ್ಲಿ ಗಮನಾರ್ಹ ಫಿಕ್ಸಿಡ್ ಡೆಪೋಸಿಟ್ ಇದೆ.
ಮಜಿಯವರ ಮೂರು ಹೆಣ್ಣು ಮಕ್ಕಳು ಈಗ ಭುವನೇಶ್ವರದ ವಸತಿ ಶಾಲೆಯಲ್ಲಿ ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ.
ಅವರು ಮಂಗಳವಾರ ತನ್ನ ಪತ್ನಿಯ ಮೃತ ದೇಹವನ್ನು ಚಾಪೆಯಲ್ಲಿ ಸುತ್ತಿ ಭುಜಗಳ ಮೇಲೆ ಹೊತ್ತುಕೊಂಡು 10 ಕಿ.ಮೀ ನಡೆದುಕೊಂಡು ಹೋದ ಅದೇ ಬೀದಿಗೆ ಭೇಟಿ ನೀಡಿದರು. ಈಗ ನಡೆದುಕೊಂಡು ಅಸಹಾಯಕ ಸ್ಥಿತಿಯಲ್ಲಿ ಅಲ್ಲ. 65,000 ರೂಪಾಯಿ ನೀಡಿ ಹೊಸದಾಗಿ ಖರೀದಿಸಿದ ಬೈಕ್ ನಲ್ಲಿ. ಈಗ ಅವರ ಲುಕ್ ನೋಡಿ.