ವಿಜಯಪುರ: ದಲಿತ ವಿದ್ಯಾರ್ಥಿನಿಯ ಮೇಲೆ 6 ರಿಂದ 7 ಮಂದಿ ಸೇರಿಕೊಂಡು ಬರ್ಬರವಾಗಿ ಅತ್ಯಚಾರಗೈದು ಕೊಲೆಗೈದ ಹೇಯ ಘಟನೆ ದರ್ಗಾ ಊರಿನಲ್ಲಿ ನಡೆದಿದೆ.
ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬಂಧಿತರು ಕೈಲಾಸ್ ಮತ್ತು ಸಾಗರ್ ಎಂದು ತಿಳಿದು ಬಂದಿದೆ. ಉಳಿದ ಅತ್ಯಚಾರಿಗಳು ಅಪ್ರಾಪ್ತರೆಂದು ಮಾಹಿತಿ ಲಭ್ಯವಾಗಿದ್ದು, ಆರೋಪಿಗಳಿಗಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ.

ವಿದ್ಯಾರ್ಥಿನಿ 9 ನೇ ತರಗತಿಯಲ್ಲಿ ಕಲಿಯುತ್ತಿರುವ ಬಗ್ಗೆ ತಿಳಿದು ಬಂದಿದ್ದು, ಮೇಲ್ವರ್ಗದ ಕಾಮುಕರು ಸೇರಿಕೊಂಡು ಈ ಕೃತ್ಯ ನಡೆಸಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಯಾವುದೇ ಮಾಧ್ಯಮಗಳು ಸುದ್ದಿ ಮಾಡದೇ ಇರುವುದು ದಲಿತ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದು, ವಿದ್ಯಾರ್ಥಿನಿಯ ಮೇಲಾದ ಕೃತ್ಯಕ್ಕೆ ಕೂಡಲೇ ನ್ಯಾಯ ದೊರಕಿಸಿಕೊಡುವಂತೆ ಅಪರಾಧಿಗಳನ್ನು ಬಂಧಿಸುವಂತೆ ಒತ್ತಾಯಿಸಿವೆ.

ಶವವಿಟ್ಟು ದಲಿತ ಸಂಘಟನೆಗಳಿಂದ ಪ್ರತಿಭಟನೆ : ವಿಜಯಪುರದ ಅಂಬೇಡ್ಕರ್ ಸರ್ಕಲ್ ನಲ್ಲಿ ಶವವಿಟ್ಟು ದಲಿತ ಸಂಘರ್ಷ ಸಮಿತಿಗಳು ಪ್ರತಿಭಟನೆ ನಡೆಸುತ್ತಿದ್ದು ನ್ಯಾಯಕ್ಕಾಗಿ ಆಗ್ರಹಿಸಿವೆ.

Leave a Reply