ನವದೆಹಲಿ: ದಿನಗೂಲಿಗಳು, ಬೀದಿ ವ್ಯಾಪಾರಿಗಳು, ಸಣ್ಣ ಉದ್ಯಮಿಗಳಿಗೆ ಚಪ್ಪಾಳೆ ತಟ್ಟುವುದರಿಂದ ಲಾಭವೇನೂ ಇಲ್ಲ ಎಂದು ರಾಹುಲ್ ಗಾಂಧಿ ಜನತಾಕರ್ಪ್ಯೂ ಬಗ್ಗೆ ಹೇಳಿದ್ದಾರೆ. ಕೊರೊನಾ ಕುರಿತು ಜಾಗೃತಿ ಮೂಡಿಸಲು ದೇಶಾದ್ಯಂತ ಭಾನುವಾರ ಜನತಾ ಕರ್ಫೂ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದು, ವಿಷಮ ಕಾಲದಲ್ಲೂ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ, ಪೊಲೀಸ್ ಮತ್ತು ಮಾಧ್ಯಮದ ಸಿಬ್ಬಂದಿಗಳನ್ನು ಮನೆಯ ಮಹಡಿ, ಬಾಲ್ಕನಿಗಳಲ್ಲಿ ನಿಂತು ಚಪ್ಪಾಳೆ ತಟ್ಟುವ ಮೂಲಕ ಪ್ರೋತ್ಸಾಹಿಸಬೇಕೆಂದು ಹೇಳಿದ್ದರು.

ಕೊರೊನಾ ದೆಸೆಯಿಂದಾಗಿ ದೇಶದ ಆರ್ಥಿಕತೆ ದುರ್ಬಲಗೊಂಡಿರುವುದನ್ನು ಉಲ್ಲೇಖಿಸಿರುವ ರಾಹುಲ್ ಗಾಂಧಿ, ಈ ಸಮಯದಲ್ಲಿ ದೇಶಕ್ಕೆ ಬೇಕಿರುವುದು ಆರ್ಥಿಕ ನೆರವು. ಆದರೆ ಇಂಥಾ ಪರಿಸ್ಥಿತಿಯಲ್ಲಿ ಪ್ರಧಾನಿ ಚಪ್ಪಾಳೆ ತಟ್ಟಲು ಕರೆ ನೀಡುತ್ತಿದ್ದಾರೆ. ಇದರ ಬದಲಾಗಿ ಆರ್ಥಿಕ ಪರಿಹಾರ, ತೆರಿಗೆ ವಿನಾಯಿತಿ ಮತ್ತು ಸಾಲಮನ್ನಾ ಕುರಿತು ತುರ್ತು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here