ಮಾಸ್ಕ್ ಧರಿಸುವ ವಿಧಾನ

1. ರೋಗ ಲಕ್ಷಣ ಇರುವವರು (ಕೆಮ್ಮು, ಜ್ವರ, ಉಸಿರಾಟಕ್ಕೆ ಅಡ್ಡಿ)

2. ಕೊರೊನಾ ದೃಢಪಟ್ಟಿರುವವರು/ ಶಂಕಿತ ವ್ಯಕ್ತಿಗಳನ್ನು ಉಪಚರಿಸುವವರು.

3. ಶ್ವಾಸಕೋಶ ಸಂಬಂಧಿಸಿದ ಅಸೌಖ್ಯಗಳಿಗೆ ಚಿಕಿತ್ಸೆ ನೀಡುವವರು

ಮಾಸ್ಕ್ ಧರಿಸುವಾಗ ಗಮನಿಸಬೇಕಾಗಿದ್ದು:

1. ಎನ್ 95 ಮಾಸ್ಕ್ ಗಳು ಪ್ರಧಾನವಾಗಿ ಆರೋಗ್ಯ ಕಾರ್ಯಕರ್ತರು ಮತ್ತು ರೋಗಿಗಳನ್ನು ಉಪಚರಿಸುವವರಿಗೆ ಇರುವುದು. ಇತರರಿಗೆ ಅಗತ್ಯವಿದ್ದರೆ ಮೂರು ಲೇಯರ್ ಸರ್ಜಿಕಲ್ ಮಾಸ್ಕ್ ಧರಿಸಿದರೆ ಸಾಕು.

2. ಬಣ್ಣವಿರುವ ಭಾಗ ಹೊರಗೆ ಕಾಣುವಂತೆ ಮಾಸ್ಕ್ ಧರಿಸಬೇಕು.

3. ಮಾಸ್ಕ್ ನ ಪ್ಲೀಟ್‍ಗಳನ್ನು ಅರಳಿಸಿ ಕೆಳಗಿನವರೆಗೆ ಬರುವಂತೆ ಧರಿಸಬೇಕು.

4. ಮುಖ, ಮಾಸ್ಕ್ ಪರಸ್ಪರ ಎಡೆ ಇಲ್ಲದಂತೆ ನೋಡಿಕೊಳ್ಳಬೇಕು.

5. ಎರಡು ಭಾಗವನ್ನು ಆಗಾಗ ಬದಲಾಯಿಸಿಕೊಳ್ಳಬಾರದು.

6. ಒಂದು ಗಂಟೆಗೆ/ ಒದ್ದೆಯಾದಂತಾದರೆ ಮಾಸ್ಕ್ ಬದಲಿಸಬೇಕು.

7. ಉಪಯೋಗಿಸಿದ ಬಳಿಕ ಆಲಸ್ಯದಿಂದ ಎಸೆಯಬಾರದು. ಸುಟ್ಟು ಹಾಕುವುದು ಉತ್ತಮ

8. ಮುಖಕ್ಕೆ ಇಟ್ಟ ಮಾಸ್ಕ್ ಅನ್ನು ಸ್ಪರ್ಶಿಸಬಾರದು.

9. ಮಾಸ್ಕ್ ತೆಗೆದು ಬೇರೆ ಧರಿಸಲು ಅದನ್ನು ಬಿಚ್ಚುವಾಗ ಅದರ ಹೊರಭಾಗವನ್ನು ಮುಟ್ಟಬಾರದು.

10. ಮಾಸ್ಕ್ ಕೊರಳಿಗೆ ತೂಗು ಹಾಕಬೇಡಿರಿ.

11. ಮಾಸ್ಕ್ ಧರಿಸಿದ್ದೇನೆ ಎಂದು ಇತರ ಮುನ್ನೆಚ್ಚರಿಕೆಗಳನ್ನು ಕಡೆಗಣಿಸಬಾರದು.

12. ಉಪಯೋಗಿಸಿ ತೆಗೆದ ಬಳಿಕ ಸೋಪು, ನೀರು ಉಪಯೋಗಿಸಿ ಅಥವಾ ಆಲ್ಕೊಹಾಲ್ ಇದ್ದ ಸಾನಿಟೈಸರ್ ಉಪಯೋಗಿಸಿ ಕೈಗಳನ್ನು ತೊಳೆಯಬೇಕು.

LEAVE A REPLY

Please enter your comment!
Please enter your name here