ಶಿಷ್ಯ: ನಾವು ಒಬ್ಬ ಮನುಷ್ಯನಿಗೆ ನೂರು ಉಪಕಾರ ಮಾಡಿದ್ರೂ,
ಒಂದು ಸಲ ಅವನ ಬಗ್ಗೆ ನಿಷ್ಕಾಳಜಿ ತೋರಿಸಿದರೆ ಸಾಕು, ಅವನು ಆ ನೂರು ಉಪಕಾರವನ್ನು ಮರೆತು ನಮ್ಮನ್ನು ತೆಗಳುತ್ತಾ ಓಡಾಡುತ್ತಾನೆ.. ಜನರೇಕೆ ಹೀಗೆ ಗುರುಗಳೇ?
ಸಂತ: ನೂರು ಉಪಕಾರ ಅವನ ಹೊಗಳಿಕೆಗೆ ಆಗಿದ್ದರೆ, ಒಂದು ತೆಗಳಿಕೆಯಿಂದ ಎಲ್ಲವೂ ನಷ್ಟವಾಯಿತು.
ಪರಮಾತ್ಮನನ್ನು ಮೆಚ್ಚಿಸಲು ಆಗಿದ್ದರೆ, ನೂರು ಉಪಕಾರದೊಂದಿಗೆ ಅವನ ತೆಗಳಿಕೆಯೂ ಖಂಡಿತಾ ನಾಳೆ ಉಪಕಾರಕ್ಕೆ ಸಿಗಲಿದೆ.
ಕೇಳು ಮಗುವೆ…ಜಗವನ್ನು ಒಲಿಸುವ ಅತ್ಯಂತ ಸುಲಭ ಮಾರ್ಗ ಜಗದೊಡೆಯನನ್ನು ಒಲಿಸುವುದು.