ಚಳಿಗಾಲ ಬಂತೆಂದರೆ ಪಾದಗಳು ಬಿರುಕು ಬಿಡಲು ಪ್ರಾರಂಭ ಆಗುತ್ತದೆ. ಕೆಲವರಿಗೆ ನಡೆದಾಡಲೂ ಕಷ್ಟ ಆಗುತ್ತದೆ.
ಸುಂದರ ಮನೋಹರ ಪಾದಗಳು ಎಲ್ಲರ ಕನಸು. ಯುವತ್ವದಲ್ಲಿ ಪಾದದ ಬಿರುಕು ತುಂಬಾ ಕಿರಿಕಿರಿಯೆನಿಸುತ್ತದೆ. ಅದಕ್ಕಾಗಿ ನೀವು ಎಲ್ಲಿಯೂ ಹೋಗಬೇಕಾಗಿಲ್ಲ. ಮನೆಯಲ್ಲೇ ಸರಿಪಡಿಸಲು ಸಾಧ್ಯವಿದೆ.
ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಲಿಂಬೆ ಶಾಂಪು ಅಥವಾ ಲಿಂಬೆ ರಸವನ್ನೋ ಸೇರಿಸಿ, ಕಾಲಿನ ಪಾದವನ್ನು ಅದರಲ್ಲಿ ಮುಳುಗಿಸಿದರೆ ಒಳ್ಳೆಯ ಪರಿಣಾಮ ಬೀರುತ್ತದೆ.
ಮಲಗುವ ಮುನ್ನ ಉಪ್ಪು ಹಾಕಿದ ಸ್ವಲ್ಪ ಬಿಸಿ ನೀರಿನಲ್ಲಿ ಪಾದಗಳನ್ನು ಮುಳುಗಿಸಿಡುವುದು ಒಳ್ಳೆಯದು.
ಆಲೀವ್ ಎಣ್ಣೆ, ಲಿಂಬೆ ನೀರು ಮಿಶ್ರಣವನ್ನು ಪಾದಕ್ಕೆ ಸವರುವುದು ಬಿರುಕನ್ನು ಇಲ್ಲವಾಗಿಸುತ್ತದೆ. ಹಳದಿ ವೀಳ್ಯದೆಲೆಯನ್ನು ಅರೆದು ಪಾದಕ್ಕೆ ಸವರುವುದು, ಮದರಂಗಿ ಎಲೆಯನ್ನು ಅರೆದು ಹಚ್ಚುವುದು ಕೂಡಾ ಇದಕ್ಕೆ ಪರಿಹಾರ.
ಇನ್ನು ಕಾಲಿಗೆ ತೆಂಗಿನೆಣ್ಣೆಯಲ್ಲಿ ಮಸಾಜ್ ಮಾಡುವುದು ಒಳ್ಳೆಯದು. ಪಾದವನ್ನು ಸ್ವಚ್ಛವಾಗಿಯೇ ಇಡುವುದರಿಂದ ಸಮಸ್ಯೆಯನ್ನು ಎದುರಿಸಲು ಸುಲಭ ದಾರಿ.
ಬೆಂಡೆಕಾಯಿ ಅರೆದು ಪಾದಗಳಿಗೆ ಸವರುವುದು ಬಿರುಕುಬಿಟ್ಟ ಕಾಲುಗಳನ್ನು ಸುಂದರಗೊಳಿಸಲು ಸಹಕಾರಿಯಾಗಿದೆ.
* ಅರಶಿನ ಮತ್ತು ಬಾಳೆದಿಂಡಿನ ನೀರನ್ನು ಸೇರಿಸಿ ಬೆರಳಿಗೆ ಕಟ್ಟುವುದು ಉಗುರು ಸುತ್ತುವಿಕೆಯನ್ನು ಹೋಗಲಾಡಿಸುತ್ತದೆ.
* ತುಳಸಿ ಎಲೆಯನ್ನು ಬಾಡಿಸಿ ತೆಂಗಿನೆಣ್ಣೆ ಸೇರಿಸಿ ಒರೆಸಿ.
*ಹಸಿ ಹಳದಿ, ತೆಂಗಿನ ಎಣ್ಣೆಗೆ ಹಾಕಿ, ಅಂತಹ ಬೆರಳಿಗೆ ಚೆನ್ನಾಗಿ ಲೇಪಿಸಿ.
* ಮದರಂಗಿ ಮತ್ತು ಹಸಿ ಅರಿಶಿನವನ್ನು ಅರೆದು ಅಂತಹ ಬೆರಳುಗಳ ಸುತ್ತಲೂ ಲೇಪಿಸಿ.
* ಲಿಂಬೆ ಹಣ್ಣಿಗೆ ತೂತುಮಾಡಿ, ಸಮಸ್ಯೆ ಬರುವ ಬೆರಳನ್ನು ಅದರೊಳಗೆ ಹುದುಗಿಸಿಡಿ.
* ಉಗುರುಗಳನ್ನು ಒಂದೇ ರೀತಿಯಲ್ಲಿ ನೇರವಾಗಿ ಕತ್ತರಿಸುವುದು ಉಗುರಿನ ಸಮಸ್ಯೆಯನ್ನು ಕೊನೆಗೊಳಿಸಲು ಸಹಾಯಕವಾಗುತ್ತದೆ.