ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ನಿವೃತ್ತಿ ಹೊಂದಿ ಹಿಮಾಲಯಕ್ಕೆ ಹೋಗಬೇಕೆಂದು ಹೊಸದಾಗಿ ಚುನಾಯಿತ ಗುಜರಾತ್ ಶಾಸಕ, ದಲಿತ ನಾಯಕ ಜಿಗ್ನೇಶ್ ಮೆವಾನಿ ಹೇಳಿದ್ದಾರೆ.
‘ಪ್ರಧಾನಿ ನಮ್ಮನ್ನು ಬೇಸರಗೊಳಿಸುತ್ತಿದ್ದಾರೆ. ಜನರನ್ನು ಮೂರ್ಖರನ್ನಾಗಿಸುವುದನ್ನು ಅವರು ನಿಲ್ಲಿಸಬೇಕು. ಮೋದಿ ಅವರು ಅರ್ಚಕರಾಗಿ ಪರ್ಯಾಯ ಉದ್ಯೋಗ ನಿರ್ವಹಿಸುವ ಬಗ್ಗೆ ಯೋಚಿಸಲಿ’ ಎಂದು ಟೈಮ್ಸ್ ನೌ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ವಾಡ್ಗಾಂನಿಂದ ಆಯ್ಕೆಯಾದ ಮೇವಾನಿ 19,696 ಮತಗಳಿಂದ ಬಿಜೆಪಿ ಎದುರಾಳಿಯನ್ನು ಸೋಲಿಸಿದ್ದಾರೆ. ಮೇವಾನಿ ವಡ್‌ಗಾಮ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದ ಮೊದಲಿಗರಾಗಿದ್ದಾರೆ .