“ನೂರು ವರ್ಷ ಚೆನ್ನಾಗಿ ಬಾಳಪ್ಪ. ನಿನಗು ಮಕ್ಕಳಿಗೂ ಆ ದೇವನು ನೂರು ವರ್ಷ ಆಯುಷ್ಯ ಕರುಣಿಸಲಿ” ಎಂದು ರಸ್ತೆಯ ಮೇಲೆ ಕೂತು ಕೈ ಚಾಚುತ್ತಿದ್ದ ಆ ಅಜ್ಜಿ ಮನಃಪೂರ್ವಕವಾಗಿ ಹರಸಿದಾಗ ಮನಸ್ಸು ತುಸು ಹಗುರವಾಯಿತು.
“ಅದೆಲ್ಲ ಸರಿ ಅಮ್ಮ, ನೀವು ಯಾವೂರವರು ಇಲ್ಲಿ ಯಾಕೆ ಕೂತು ಭಿಕ್ಷೆ ಬೇಡುತ್ತಿದ್ದೀರಾ? ತಮಗೆ ಗಂಡ, ಮಕ್ಕಳು, ಪರಿವಾರಗಳು ಅಂತ ಯಾರು ಇಲ್ವೆ? ಎಂದಾಗ ” ಇದ್ದಾರೆ ಮಗ! ನಾನು ತಮಿಳುನಾಡಿನವಳು ಕಳೆದ ಇಪ್ಪತೈದು ವರ್ಷಗಳಿಂದ ಇಲ್ಲೇ ಇದ್ದೀನಿ! ಒಬ್ಬಳೇ ಮಗಳು. ಮದುವೆಯಾಗಿದೆ. ಅವಳ ಗಂಡ ಕುಡುಕ. ನಾನು ಅವಳ ಮನೆಗೆ ಹೋಗೋದಿಲ್ಲ.‌ ಗಂಡ ಸತ್ತು ಹದಿನೈದು ವರ್ಷಗಳಾಯಿತು.
“ಸರಿ ನಿಮ್ಗೆ ಭಿಕ್ಷೆ ಬೇಡುವ ಅನಿವಾರ್ಯ ಯಾಕೆ ಬಂತು? ಮಗಳ ಮನೆಯಲ್ಲಿ ಇರಬಹುದಲ್ಲವೆ?” ಎಂದು ಕೇಳಿದಾಗ
“ಮನೆಯಲ್ಲಿ ನಾನು ಹೇಗಪ್ಪ ಇರಲಿ? ಮಗಳಿಗೆ ಮೂರು ಜನ ಮಕ್ಕಳಿದ್ದಾರೆ. ನಾನು ಭಿಕ್ಷೆ ಬೇಡಿದ ಹಣದಿಂದ ಅವರಿಗೇನಾದರು ತಿನ್ನಲು ತೆಗೆದುಕೊಂಡು ಹೋಗುತ್ತೇನೆ” ಎಂದಾಗ ಕಣ್ಣು ತೇವಗೊಂಡಿತು.

Image result for OLD POOR INDIAN LADY
ಸಾಂದರ್ಭಿಕ ಚಿತ್ರ

ಹೌದು ಇದು ಇಂದಿನ ಸಮಾಜಕ್ಕೆ ಹಿಡಿದ ಕೈಗನ್ನಡಿ. ಹೆತ್ತವರನ್ನು ಬೀದಿಗೆ ಹಾಕುವ ಮಕ್ಕಳು ಯಾವತ್ತೂ ಯೋಚಿಸೋದೆ ಇಲ್ಲ‌ ನಾವು ನಮ್ಮ ಹೆತ್ತವರನ್ನು ಮನೆಯಿಂದ ಹೊರದಬ್ಬಿದಾಗ ಅವರು ಕೂಡ ಹೀಗೆ ಯಾವುದೋ ಊರಿಗೆ ಹೋಗಿ, ಯಾವುದೋ ರಸ್ತೆ ಬದಿಯಲ್ಲಿ ಕೂತು ಭಿಕ್ಷೆ ಬೇಡುತ್ತಿರುವರೆಂದು. ಗಗನವೆ ಹಾಸಿಗೆ, ಭೂಮಿಯೆ ಹೊದಿಕೆ, ಮರಗಳೇ‌ ಫ್ಯಾನ್, ಏಸಿ ಇತ್ಯಾದಿ ಇವರ ಬದುಕು. ಮಕ್ಕಳನ್ನು ಹೆತ್ತ ತಪ್ಪಿಗೆ ಇಂದು ಕೆಲ ಹೆತ್ತವರು ಎದುರಿಸುತ್ತಿರುವ ಸಮಸ್ಯೆಗಳು ಇವು. ಮಕ್ಕಳನ್ನು ಹೊತ್ತು ಹೆತ್ತು ಸಾಕಿ ದೊಡ್ಡವರನ್ನಾಗಿಸಲು ಹೆತ್ತವರು ಬೇಕು. ಅದೇ ನಾವು ವಯಸ್ಸಿಗೆ ಬಂದಾಗ ನಮಗೆ ನಾವೇ! ಬಹಳ ನೋವಿನ ವಿಷಯವಲ್ಲವೆ ಇದು? ನಾವೊಮ್ಮೆ ನಮ್ಮ ಹೆತ್ತವರ ಪರಿಸ್ಥಿತಿಯ ಬಗ್ಗೆ ನೆನೆದುಕೊಳ್ಳೋಣ. ಕರುಳು ಹಿಂಡಿದಂತಾಗುತ್ತದಲ್ಲವೆ?

Image result for OLD POOR INDIAN LADY
ಸಾಂದರ್ಭಿಕ ಚಿತ್ರ

ಕೆಲ ಗಂಡು ಮನಸ್ಸು ಎಷ್ಟೊಂದು ಕ್ರೂರವಾಗಿದೆ ನೋಡಿ.‌ ಹೆಣ್ಣಿನ ಕಾಳಜಿಯ ಬಗ್ಗೆ ಬರೀ ಮಾತುಗಳು ಮಾತ್ರವೇ ಬಾಯಿಂದ ಹೊರಬರುತ್ತದೆ ಆದರೆ ವಾಸ್ತವ ಬೇರೆಯೇ ಆಗಿದೆ. ಪ್ರತಿನಿತ್ಯ ನಾವು ನೂರಾರು ಜನ ಮಹಿಳೆಯರು, ವೃದ್ಧರನ್ನು ರಸ್ತೆಯ ಬದಿಯಲ್ಲಿ, ಬಸ್ ನಿಲ್ದಾಣದಲ್ಲಿ ಮಲಗಿರುವುದನ್ನು ನೋಡಿರುತ್ತೇವೆ. ಇವರೆಲ್ಲ ಯಾರು? ಇವರ ಪರಿಸ್ಥಿತಿಗೆ ಕಾರಣ ಯಾರು? ಪತಿ, ಮಕ್ಕಳಿಲ್ಲವೆ? ಕುಟುಂಬಸ್ಥರು? ಕಡೆಯ ಪಕ್ಷ ಗ್ರಾಮಸ್ಥರು? ಒಬ್ಬ ಮನುಷ್ಯನ ಮೇಲೆ ಕನಿಷ್ಠ ಕರುಣೆ ತೋರುವ ಔದಾರ್ಯವು ನಮ್ಮಲ್ಲಿಲ್ಲ ಅಂದರೆ‌ ಮಾನವೀಯತೆ ನಮ್ಮೊಳಗೆ ಸತ್ತು ಹೋಗಿದೆ ಎಂದರ್ಥಲ್ಲವೆ? ಮನುಷ್ಯ ಭಾವಜೀವಿಯಲ್ಲ ಯಾಂತ್ರಿಕವಾಗಿ ಬದುಕುತ್ತಿದ್ದಾನೆಯೇ ಎಂಬ ಪ್ರಶ್ನೆ ಮೂಡುತ್ತಿಲ್ಲವೆ?

Image result for OLD POOR INDIAN LADY WITH GRAND CHILDRENS
ಸಾಂದರ್ಭಿಕ ಚಿತ್ರ

ಆ ತಾಯಿಯನ್ನು ನೋಡಿದಾಗ ನಮ್ಮ ಭವಿಷ್ಯದ ದಿನಗಳು ಹೇಗಿರುಬಹುದೆಂಬ ಕಲ್ಪನೆಯಾಗುತ್ತಿದೆ. ಯಾರ ಆಶ್ರಯವೂ ಇಲ್ಲದೆ ಸ್ವಾತಂತ್ರ್ಯವಾಗಿ‌ ಇಡೀ ಪ್ರಪಂಚವೇ ನಮ್ಮ ಊರು ಎಂಬ ನೆಲೆಯಲ್ಲಿ ಬದುಕುತ್ತಿದ್ದಾರೆ. ಇಂತಹ ಪರಿಸ್ಥಿತಿ ಯಾರಿಗೂ ಬಾರದಿರಲಿ ಎಂಬ ಆಶಯದೊಂದಿಗೆ.

ಲೇಖಕರು: ಸಲಾಂ ಸಮ್ಮಿ

Leave a Reply