ಭಾರತೀಯ ಸೇನಾ ಯೋಧರು ನಿಯಂತ್ರಣ ರೇಖೆಯನ್ನು (ಎಲ್ ಓ ಸಿ) ದಾಟಿದ್ದಾರೆ ಮತ್ತು ಮೂರು ಪಾಕಿಸ್ತಾನ ಸೈನಿಕರನ್ನು ಕೊಂದಿದ್ದಾರೆ ಎಂದು ಸುದ್ದಿ ಸಂಸ್ಥೆ ಎ ಎನ್ ಐ ವರದಿ ಮಾಡಿದೆ.
ಗುಪ್ತಚರ ಮೂಲಗಳನ್ನು ಉಲ್ಲೇಖಿಸಿರುವ ವರದಿಯು, ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಕೆರಿ ಸೆಕ್ಟರ್ನಲ್ಲಿ ಶನಿವಾರ ನಾಲ್ಕು ಭಾರತೀಯ ಸೇನಾ ಯೋಧರನ್ನು ಹತ್ಯೆಗೈದಿದಕ್ಕೆ ಪ್ರತಿಕಾರವಾಗಿ ಈ ಸೇನಾ ಕಾರ್ಯಾಚರಣೆ ಮಾಡಲಾಗಿದೆ ಎಂದು ಹೇಳಿದೆ.
ಆದಾಗ್ಯೂ, ಪಾಕಿಸ್ತಾನದ ಸೇನಾಪಡೆಗಳ ಪ್ರಚಾರ ವಿಭಾಗ ಇಂಟರ್-ಸರ್ವಿಸ್ ಪಬ್ಲಿಕ್ ರಿಲೇಶನ್ಸ್ (ಐಎಸ್ಪಿಆರ್) ದಾಳಿಯಲ್ಲಿ ಪಾಕಿಸ್ತಾನ ಸೇನೆಯು “ಬಲವಾದ ಪ್ರತಿಕ್ರಿಯೆಯನ್ನು” ನೀಡಿದೆ ಎಂದು ಹೇಳಿದೆ.
“ರಾವ್ಲಾಕೋಟ್ನ ರುಕ್ ಚಕ್ರ ವಲಯದಲ್ಲಿ ಶೆಲ್ ದಾಳಿ ಸಂಭವಿಸಿದೆ ಮತ್ತು ಪಾಕ್ ಪಡೆಗಳಿಂದ ಬಲವಾದ ಪ್ರತಿಕ್ರಿಯೆಯನ್ನು ಪಡೆಯಿತು” ಎಂದು ಡಾನ್ ನ್ಯೂಸ್ ಐ ಎಸ್ ಪಿ ಆರ್ ಅನ್ನು ಉಲ್ಲೇಖಿಸಿದೆ.
ಈ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನವು 881 ಬಾರಿ ನಿಯಂತ್ರಣ ರೇಖೆಯ (ಎಲ್ ಓ ಸಿ ) ಮತ್ತು ಇಂಟರ್ನ್ಯಾಷನಲ್ ಬಾರ್ಡರ್ (ಐಬಿ) ವನ್ನು ಉಲ್ಲಂಘಿಸಿದೆ.
ಡಿಸೆಂಬರ್ 19 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಡಿಸೆಂಬರ್ 10 ರವರೆಗೆ 771 ಬಾರಿ ಎಲ್ ಓ ಸಿ ಯಲ್ಲಿ ಪಾಕಿಸ್ತಾನವು ಕದನ ವಿರಾಮವನ್ನು ಉಲ್ಲಂಘಿಸಿರುವುದಾಗಿ ಮತ್ತು ನವೆಂಬರ್ ಕೊನೆಯವರೆಗೆ ಐಬಿಯಲ್ಲಿ 110 ಬಾರಿ ಉಲ್ಲಂಘಿಸಿದೆ ಎಂದು ಗೃಹ ಸಚಿವ ಹನ್ಸ್ರಾಜ್ ಅಹಿರ್ ಹೇಳಿದ್ದಾರೆ.
ಐಬಿ, ಎಲ್ ಓ ಸಿ ಮತ್ತು ಜಮ್ಮು ಕಾಶ್ಮೀರದ ನೈಜ ಗ್ರೌಂಡ್ ಪೊಸಿಷನ್ ಲೈನ್ಗಳ ನಡುವೆ ಭಾರತ ಮತ್ತು ಪಾಕಿಸ್ತಾನ ನಡುವಿನ ಒಪ್ಪಂದ ನವೆಂಬರ್ 2003 ರಲ್ಲಿ ಜಾರಿಗೆ ಬಂದಿತು.