ಮಾಡುವ ವಿಧಾನ ಮತ್ತು ಬೇಕಾಗುವ ಸಾಮಗ್ರಿಗಳು:
ಊರಿನ ಕೋಳಿಯ ತುಂಡುಗಳು- 20 ಗ್ರಾಂ, ಈರುಳ್ಳಿ- 3, ಬೆಳ್ಳುಳ್ಳಿ- 4 ಎಸಳು, ಶುಂಠಿ- ಉದ್ದಕ್ಕೆ ಕತ್ತರಿಸಿದ್ದು 5 ಗ್ರಾಂ, ಸಾಸಿವೆ- 2 ಗ್ರಾಂ, ತೆಂಗಿನ ಎಣ್ಣೆ- 10 ಎಂ.ಎಲ್., ಉಪ್ಪು- ರುಚಿಗೆ.
ಮಸಾಲೆ ತಯಾರಿಸಲು:
ಹಳದಿ ಹುಡಿ- 1/2 ಟೀ ಸ್ಪೂ., ಕರಿಮೆಣಸಿನ ಹುಡಿ- 1/2 ಟೀ ಸ್ಪೂ., ಲಿಂಬೆ ನೀರು- 1 ಟೀ ಸ್ಪೂ., ಗರಮ್ ಮಸಾಲೆ- 1/2 ಟೀ ಸ್ಪೂ.
ಸ್ಟಾಕ್ ತಯಾರಿಸಲು:
ಊರಿನ ಕೋಳಿಯ ಎಲುಬು 200 ಗ್ರಾಂ, ಕರಿಬೇವಿನ ಎಲೆ- 3 ಎಸಳು, ಶುಂಠಿ- 1 ತುಂಡು, ಬೆಳ್ಳುಳ್ಳಿ- 10 ಗ್ರಾಂ, ಹಳದಿ ಹುಡಿ- 1/2 ಟೀ ಸ್ಪೂ.
ಕೋಳಿಯ ಎಲುಬುಗಳನ್ನು ಚೆನ್ನಾಗಿ ಶುಚಿಗೊಳಿಸಿ. ಪ್ಯಾನಿನಲ್ಲಿ ಎಣ್ಣೆ ಹಾಕಿ ಅದರಲ್ಲಿ ಕರಿಬೇವಿನ ಎಲೆ, ಶುಂಠಿ, ಬೆಳ್ಳುಳ್ಳಿ, ಹಳದಿ ಹುಡಿ ಸೇರಿಸಿ ಅಡಿಮೇಲು ಮಾಡಿ. ಎರಡು ಲೀಟರ್ ನೀರು ಸೇರಿಸಿ ಕುದಿಸಿ ರುಚಿಗೆ ಉಪ್ಪು ಸೇರಿಸಿ. ನೀರು ಅರ್ಧ ಭಾಗವಾಗುವ ವರೆಗೆ ಕುದಿಸಿ.
ಸೂಪ್ ತಯಾರಿಸುವ ವಿಧಾನ:
ಒಂದು ಪ್ಯಾನಿನಲ್ಲಿ ತೆಂಗಿನ ಎಣ್ಣೆ ಬಿಸಿ ಮಾಡಿ. ಅದರಲ್ಲಿ ಸಾಸಿವೆ ಸಿಡಿಸಿ. ಅರೆದಿಟ್ಟ ಶುಂಠಿ, ಬೆಳ್ಳುಳ್ಳಿ, ನೀರುಳ್ಳಿ ಸೇರಿಸಿ ಬಾಡಿಸಿ. ಇದಕ್ಕೆ ಸಣ್ಣಗೆ ಕತ್ತರಿಸಿಟ್ಟ ಕೋಳಿ ತುಂಡುಗಳನ್ನು ಸೇರಿಸಿ ಹಳದಿ ಹುಡಿ, ಕರಿಮೆಣಸಿನ ಹುಡಿ, ಉಪ್ಪು ಸೇರಿಸಿ ಕೋಳಿ ಬೇಯುವವರೆಗೆ ಇಡಿರಿ. ತಯಾರಿಸಿಟ್ಟ ಸ್ಟಾಕ್‍ನ ಎಲುಬುಗಳನ್ನು ತೆಗೆದು ಅದರ ನೀರನ್ನು ಕೋಳಿಗೆ ಸೇರಿಸಿ ಚೆನ್ನಾಗಿ ಕುದಿದ ಬಳಿಕ ಗರಮ್ ಮಸಾಲೆ ಹುಡಿ, ಲಿಂಬೆ ನೀರು ಹಾಕಿ ಕುದಿಸಿ. ಸೂಪ್ ರೆಡಿ.
ವಿ.ಸೂ. ಚಿತ್ರದಲ್ಲಿ ವಿವಿಧ ಸಂಭಾವ್ಯ ಸೂಪ್ ಗಳ ಫೋಟೋ ಹಾಕಲಾಗಿದೆ..