ಇಸ್ಲಾಮಾಬಾದ್: ಮುಂದಿನ ವಾರದಿಂದ ಎರಡು ಹಂತಗಳಲ್ಲಿ 291 ಭಾರತೀಯ ಮೀನುಗಾರರನ್ನು ಮಾನವೀಯ ನೆಲೆಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಪಾಕಿಸ್ತಾನ ಹೇಳಿದೆ.

ಪಾಕಿಸ್ತಾನ 291 ಭಾರತೀಯ ಮೀನುಗಾರರನ್ನು ಡಿಸೆಂಬರ್ 29, 2017 ಮತ್ತು ಜನವರಿ 08, 2018 ರಂದು ವಘಾ ಬಾರ್ಡರ್ ಮೂಲಕ ಮಾನವೀಯ ನೆಲೆಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ವಿದೇಶಾಂಗ ಕಚೇರಿ ವಕ್ತಾರ ಡಾ. ಮೊಹಮ್ಮದ್ ಫೈಸಲ್ ತಿಳಿಸಿದ್ದಾರೆ.

ಅಕ್ಟೋಬರ್ ನಲ್ಲಿ ಪಾಕಿಸ್ತಾನವು 68 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದೆ.
ಯಾವಾಗಲೂ ಮಾನವೀಯ ಸಮಸ್ಯೆಗಳನ್ನು ಸುಗಮಗೊಳಿಸಬೇಕೇ ಹೊರತು ರಾಜಕೀಯಗೊಳಿಸಬಾರದು ಎಂದು ಫೈಸಲ್ ಹೇಳಿದರು.

ಭಾರತ ಹಾಗೂ ಪಾಕಿಸ್ತಾನ ಜಲಗಡಿಯನ್ನು ದಾಟಿದವರನ್ನು ಉಭಯ ದೇಶಗಳು ಅಕ್ರಮವಾಗಿ ಗಡಿ ಪ್ರವೇಶಿಸಿದ ಆರೋಪದ ಮೇಲೆ ಬಂಧಿಸಲಾಗುತ್ತದೆ.

ಪಾಕಿಸ್ತಾನ ಸಾಗರ ಭದ್ರತಾ ಪಡೆಯ ವಕ್ತಾರರೊಬ್ಬರು, ಈ ವರ್ಷ ಭಾರತದ ಒಟ್ಟು 400 ಮೀನುಗಾರರನ್ನು ಬಂಧಿಸಿದ್ದೇವೆ ಎಂದು ಹೇಳಿದ್ದರು

Leave a Reply