ಅಮೆರಿಕಾದಲ್ಲಿ ವಾಸಿಸುತ್ತಿರುವ ಈ ವ್ಯಕ್ತಿ ಮಾರಣಾಂತಿಕ ಕಾಯಿಲೆಗೆ ತುತ್ತಾದ ಸಾವಿರಾರು ಮಕ್ಕಳಿಗೆ ಆಶ್ರಯವಾಗಿದ್ದಾರೆ. ಈ ಅನಾರೋಗ್ಯದ ಮಗು ಯಾವುದೇ ಸಮಯದಲ್ಲಿ ಸಾಯಬಹುದು. ಆದರೂ ಅವರನ್ನು ತನ್ನ ಮನೆಯಲ್ಲಿಟ್ಟು ಸಂತೋಷ ಪಡಿಸಲು ಪ್ರಯತ್ನಿಸುತ್ತಾರೆ.
ಲೆಬನಾನ್ ನಿಂದ ಅಮೆರಿಕಕ್ಕೆ ಬಂದು ನೆಲೆಸಿರುವ 62 ವರ್ಷದ ಮುಹಮ್ಮದ್ ಬಜೀಕ್, ಕಳೆದ ಇಪ್ಪತ್ತು ವರ್ಷಗಳಿಂದ ರೋಗದಲ್ಲಿ ನರಳುತ್ತಿರುವ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.ಅವರು ಆ ಮಕ್ಕಳಲ್ಲಿ ಭರವಸೆ ಮೂಡಿಸುತ್ತಾರೆ.
ಲಾಸ್ ಏಂಜಲೀಸ್ನ ಮಕ್ಕಳ ಮತ್ತು ಕುಟುಂಬ ಸೇವೆಗಳ ಇಲಾಖೆ (ಡಿಸಿಎಫ್ಎಸ್) ನ ಮೆಲಿಟಸ್ ಹೇಳುವಂತೆ, “ಮಗುವಿಗೆ ಮನೆಯ ತರಹದ ಪರಿಸರವನ್ನು ನೀಡಲು ಯಾರಾದರೂ ಕೇಳಿದಾಗ, ಮುಹಮ್ಮದ್ ಬಜೀಕ್ ರವರ ಹೆಸರು ಮಾತ್ರ ನಮ್ಮ ಮನಸ್ಸಿಗೆ ಬರುತ್ತದೆ.”
“ರೋಗ ಪೀಡಿತ ಮಕ್ಕಳನ್ನು ಸ್ವಂತ ಮಕ್ಕಳಂತೆ ಕಾಣಬೇಕು. ಅವರು ಸಾವಿನ ಹತ್ತಿರ ಇದ್ದಾರೆ. ಓರ್ವ ಮನುಷ್ಯ ಎಂಬ ನೆಲೆಯಲ್ಲಿ ಅವರನ್ನು ಸಂತುಷ್ಟ ಪಡಿಸಲು ನಾನು ಗರಿಷ್ಠ ಪ್ರಯತ್ನ ಪಡುತೇನೆ” ಎಂದು ಮುಹಮ್ಮದ್ ಬಜೀಕ್ ಹೇಳುತ್ತಾರೆ.