ಲಕ್ ನೌ: ಆಲ್ ಇಂಡಿಯ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ತ್ರಿವಳಿ ತಲಾಕ್ ವಿರುದ್ಧ ಮೋದಿ ಸರಕಾರ ಮುಂದಿಟ್ಟಿರುವ ಮಸೂದೆ ಮಹಿಳಾ ಹಕ್ಕು, ಸಂವಿಧಾನ ವಿರೋಧಿಯೆಂದು ಹೇಳಿದ್ದು, ಅದನ್ನು ವಾಪಸು ಪಡೆಯುವಂತೆ ಬೇಡಿಕೆಯಿಟ್ಟಿದೆ.
ಬೋರ್ಡ್‍ನ ಕಾರ್ಯಕಾರಿಣಿ ಸಮಿತಿಯ ತುರ್ತು ಬೈಠಕ್‍ನ ನಂತರ ಪತ್ರಕರ್ತರೊಂದಿಗೆ ಮಾತಾಡುತ್ತಾ ಅದರ ವಕ್ತಾರ ಮೌಲಾನ ಖಲೀಲುರ್ರಹ್ಮಾನ್ ಸಜ್ಜಾದ್ ನೂಮಾನಿ, ಕೇಂದ್ರದ ಪ್ರಸ್ತಾಪಿತ ವಿಧೇಯಕದ ಕುರಿತು ವಿಸ್ತಾರವಾಗಿ ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದಲ್ಲದೆ ಮುಸ್ಲಿಮ್ ಪರ್ಸನಲ್ ಲಾದಲ್ಲಿ ಸರಕಾರ ಹಸ್ತಕ್ಷೇಪಿಸಲು ಯತ್ನಿಸುತ್ತಿದೆ. ಒಂದು ವೇಳೆ ಈ ವಿದೇಯಕ ಕಾನೂನು ಆದರೆ ಮಹಿಳೆಯರು ತುಂಬಾ ಕಷ್ಟಪಡಬೇಕಾಗಬಹುದು ಮತ್ತು ಘರ್ಷಣೆಯನ್ನು ಅನುಭವಿಸಬೇಕಾದೀತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ಪ್ರಸ್ತಾಪಿತ ವಿಧೇಯಕ ಸಂವಿಧಾನದ ಸಿದ್ಧಾಂತಕ್ಕೆ ವಿರೋಧವಾಗಿದೆ. ಕಳೆದ ಆಗಸ್ಟ್ 22ಕ್ಕೆ ಸುಪ್ರೀಂ ಕೋರ್ಟಿನ ತೀರ್ಪಿನ ವಿರುದ್ಧ ಈ ಮಸೂದೆ ಇದೆ. ಕೇಂದ್ರ ಸರಕಾರ ತೀರ್ಪಿಗಿಂತ ಬಹಳಷ್ಟು ಮುಂದೆ ಸಾಗಿದೆ ಎಂದು ಅವರು ಹೇಳಿದರು.

ವಿಷಾದದ ವಿಷಯವೆಂದರೆ ಈ ಮಸೂದೆ ರೂಪಿಸುವಾಗ ಕೇಂದ್ರ ಸರಕಾರ ಯಾವುದೇ ಮುಸ್ಲಿಮರ ಸಂಘಟನೆ, ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಯಾವುದೇ ಮುಸ್ಲಿಮ್ ವಿದ್ವಾಂಸರ ಅಥವಾ ಯಾವುದೇ ಮಹಿಳಾ ಹಕ್ಕು ಹೋರಾಟಗಾರರನ್ನು ಸಂಪರ್ಕಿಸಿಲ್ಲ, ಚರ್ಚಿಸಿಲ್ಲ ಎಂದು ನುಮಾನಿ ತಿಳಿಸಿದರು.
ಈಗ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಬಾರದು. ಒಂದು ವೇಳೆ ಮಂಡಿಸಲೇ ಬೇಕೆಂದಿದ್ದರೆ ಅದಕ್ಕಿಂತ ಮೊದಲು ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಹಗೂ ಮುಸ್ಲಿಮ್ ಮಹಿಳಾ ಸಂಘಟನೆಗಳೊಂದಿಗೆ ಚರ್ಚಿಸಲಿ ಎಂದು ನುಮಾನಿ ಆಗ್ರಹಿಸಿದ್ದಾರೆ.
ಬೋಡ್‍ನ ಹಿರಿಯ ಮಹಿಳಾ ಸದಸ್ಯೆ ಅಸ್ಮಾ ಝಹ್ರಾ ಕೇಂದ್ರ ಸರಕಾರದ ಪ್ರಸ್ತಾಪಿಸಿದ ಮಸೂದೆ ಮುಸ್ಲಿಮ್ ಮಹಿಳೆಯರ ಹಿತವನ್ನು ಕಡೆಗಣಿಸಿದೆ ಎಂದು ಹೇಳಿದ್ದಾರೆ.

Leave a Reply