ಕೋತಿಯನ್ನು ಹೊಡೆದು ಸಾಯಿಸುವ ಭಯಂಕರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ವಾಷಿಮ್ ಪೋಲೀಸರು ಅಂತಿಮವಾಗಿ ಅದೇ ಸಂಬಂಧದಲ್ಲಿ 23 ವರ್ಷದ ವ್ಯಕ್ತಿಯೊಬ್ಬನನ್ನು ಮಹಾರಾಷ್ಟ್ರದಲ್ಲಿ ಬಂಧಿಸಿದ್ದಾರೆ. ಮಂಗವನ್ನು ಹೊಡೆದು ಸಾಯಿಸಿದ್ದರಲ್ಲಿ ಇಬ್ಬರು ಚಿಕ್ಕ ಹುಡುಗರೂ ಜೊತೆಗೆ ಶಾಮೀಲಾಗಿದ್ದರು.

ಪೊಲೀಸರ ಪ್ರಕಾರ, ಪವನ್ ಬಂಗಾರ್ (23) ಮತ್ತು ಅವರ ಇಬ್ಬರು ಸ್ನೇಹಿತರು ತೋಟಕ್ಕೆ ಪ್ರವೇಶಿಸಿದ ಮಂಗವನ್ನು ಹಿಡಿದು ನಿಷ್ಕರುಣೆಯಿಂದ ಸಾಯುವವರೆಗೆ ಹೊಡೆದಿದ್ದು, ಚಿಕ್ಕ ಹುಡುಗರಲ್ಲಿ ಒಬ್ಬ ತನ್ನ ಮೊಬೈಲ್ ಫೋನ್ನಲ್ಲಿ ಘಟನೆಯ ವೀಡಿಯೊವನ್ನು ಚಿತ್ರೀಕರಿಸಿ,ಅದನ್ನು ವಾಟ್ಸಪ್ ನಲ್ಲಿ ಹರಿಯ ಬಿಟ್ಟಿದ್ದನು. ವಿಡಿಯೋ ವೈರಲ್ ಆದ ಕಾರಣ
ಇದು ಅರಣ್ಯ ಅಧಿಕಾರಿಗಳ ಗಮನಕ್ಕೆ ತರಲಾಯಿತು.

ಅರಣ್ಯ ಅಧಿಕಾರಿ ಮೋಹನ್ ಭೋಂಸ್ಲೆ ಇದರ ವಿರುದ್ಧ ದೂರು ದಾಖಲಿಸಿದ್ದರು. ನಂತರ ವನ್ಯಜೀವಿ ಸಂರಕ್ಷಣಾ ಕಾಯಿದೆಯ ವಿಭಾಗ 9 (ಬೇಟೆ ನಿಷೇಧ) ಅಡಿಯಲ್ಲಿ ಬಂಗಾರ್ ರನ್ನು ಬಂಧಿಸಲಾಯಿತು.
ಮುಸ್ಲಿಮ್ ಯುವಕನಿಂದ ಆಂಜನೇಯ ಪ್ರತಿರೂಪದ ಕೋತಿಗೆ ಹಲ್ಲೆ ಎಂಬ ತಲೆಬರಹದಡಿ ಈ ವಿಡಿಯೋ ಹರಿದಾಡುತ್ತಿತ್ತು. ವಿಡಿಯೋ ವೈರಲ್ ಗೊಳಿಸದ ದುರುದ್ದೇಶ ವಿಫಲವಾಗಿದ್ದು, ಇದೀಗ ಈ ವೀಡಿಯೋದ ನೈಜತೆ ಬಯಲಾಗಿದೆ.

Leave a Reply