ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವ ಕರ್ನಾಟಕ ನಿರ್ಮಾಣದ ರಾಜ್ಯ ಪ್ರವಾಸದಲ್ಲಿದ್ದು, ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, “ಯಡಿಯೂರರಪ್ಪ ಅವರಿಗೆ ದಮ್ ಇಲ್ಲ. ಹತಾಶೆಗೆ ಒಳಗಾಗಿ ನನ್ನ ಬಗ್ಗೆ ಬಾಯಿಗೆ ಬಂದ ಹಾಗೆ ಬೈಕೊಂಡು ತಿರುಗಾಡುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.

ಯಡಿಯೂರಪ್ಪರ ಬಳಿ ನಾನು ಒಂದು ಬಾರಿ ಹೇಳಿದ್ದೆ ಯಡಿಯೂರಪ್ಪರವರೇ, ನೀವು ಹೀಗೆ ಬೈಕೊಂಡು ತಿರುಗಾಡಬೇಡಿ. ಬನ್ನಿ ನಾವಿಬ್ಬರು ಸಾರ್ವಜನಿಕವಾಗಿ ಚರ್ಚೆ ನಡೆಸೋಣ. ನಮ್ಮ ಮತ್ತು ನಿಮ್ಮ ಸರಕಾರದ ಸಾಧನೆಯ ಬಗ್ಗೆ ಜನರ ಮುಂದೆ ಬಹಿರಂಗ ಪಡಿಸುವ, ಆಗ ಜನರು ಏನು ತೀರ್ಪು ಕೊಡುತ್ತಾರೆ ಎಂದು ನೋಡೋಣ ಎಂದಿದ್ದೆ.
ಆದರೆ ಯಡಿಯೂರಪ್ಪ ಅದಕ್ಕೆ ಬರಲ್ಲ. ಧೈರ್ಯ ಇಲ್ಲ, ದಮ್ ಇಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ರು.

ಭಾಷಣದುದ್ದಕ್ಕೂ ಯಡಿಯೂರಪ್ಪ ಬಗ್ಗೆ ಲೇವಡಿ ಮಾಡಿದ ಅವರು ಈ ಹಿಂದೆ ಯಡಿಯೂರಪ್ಪ ಬಿಜೆಪಿ ಪಕ್ಷ ತೊರೆದು ಕೆಜಿಪಿ ಪಕ್ಷ ರಚಿಸಿ ಅಲ್ಲಾಹನ ಆಣೆ ಟಿಪ್ಪು ಜಯಂತಿ ಮಾಡೇ ಮಾಡ್ತೀವಿ ಎಂದಿದ್ದರು. ಆದರೆ ಈಗ ಏನಾಯಿತು ಯಡಿಯೂರಪ್ಪನವರೇ ಎಂದು ಪ್ರಶ್ನಿಸಿದ್ದಾರೆ. ನಾವು ಮಾಡಿದ ಸಾಧನೆಯನ್ನು ಅರಗಿಸಿಕೊಳ್ಳಲು ಆಗದೆ ಯಡಿಯೂರಪ್ಪನವರು ನಮ್ಮ ಮೇಲೆ ಸುಳ್ಳಾರೋಪ ಹೊರಿಸುತ್ತಿದ್ದಾರೆ. ರೈತರು ಸಾಲಮನ್ನಾ ಮಾಡಿ ಎಂದಿದ್ದಕ್ಕೆ ಗುಂಡು ಹಾರಿಸಿ ಕೊಂದಿದ್ದಾರೆ ಯಡಿಯೂರಪ್ಪನವರಿಗೆ ನಮ್ಮನ್ನು ಪ್ರಶ್ನಿಸುವ ನೈತಿಕತೆ ಇದೆಯೇ ಎಂದು ಇದೇ ವೇಳೆ ತೀಕ್ಷ್ಣವಾಗಿ

Leave a Reply