ಹೈದರಾಬಾದ್: ‘ಪ್ರೀತಿ ಮಾಯ ಹುಷಾರು, ಕಣ್ಣೀರ್ ಮಾರೋ ಬಝಾರು’ ಎಂಬ ಜನಪ್ರಿಯ ಕನ್ನಡ ಹಾಡನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಇಂದಿನ ಪ್ರೀತಿ ಪ್ರೇಮದಲ್ಲಿ ಸಾವು-ನೋವುಗಳು ಇವೆಲ್ಲವೂ ಸಹಜವಾಗಿದೆ. ಸ್ವಲ್ಪ ಎಡವಟ್ಟಾದರು ಕೊಂದೇ ಬಿಡುವ ಮಟ್ಟಿಗೂ ಕೆಲವರು ತಲುಪಿ ಬಿಡುತ್ತಾರೆ.
ಅಂಥದ್ದೇ ಒಂದು ಪ್ರಕರಣ ಹೈದರಾಬಾದಿನ ಲಾಲಿಗೋಡದ ಪ್ರದೇಶದಲ್ಲಿ ನಡೆದಿದೆ. ತನ್ನನ್ನು ಪ್ರೀತಿಸಲು ನಿರಾಕರಿಸಿದಲೆಂದು ಯುವತಿಯೊರ್ವಳನ್ನು ಭಗ್ನ ಪ್ರೇಮಿಯೋಬ್ಬ ಹಾಡುಹಗಲೇ ಪೆಟ್ರೋಲ್ ಸುರಿದು ಸುಟ್ಟು ಕೊಲ್ಲಲೆತ್ನಿಸಿದ ಘಟನೆ ವರದಿಯಾಗಿದೆ. ಸಧ್ಯಕ್ಕೆ ಆಕೆ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಯುವತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ವೈದ್ಯರು ಹೇಳುತ್ತಾರೆ.
ಯುವತಿ ಕೆಲಸ ಮುಗಿಸಿ ತನ್ನ ಮನೆಗೆ ಮರಳುತ್ತಿದ್ದ ವೇಳೆ ಆಕೆಯನ್ನು ಪ್ರೀತಿಸುತ್ತಿದ್ದ ಯುವಕ ಆಕೆಯ ಮೇಲೆ ಅಕ್ರಮಣ ನಡೆಸಿದ್ದಾನೆ. ತನ್ನ ಬೈಕ್ ನಲ್ಲಿ ಯುವತಿಯನ್ನು ಹಿಂಬಾಲಿಸಿದ ಯುವಕ ಕೆಲ ನಿಮಿಷಗಳ ಕಾಲ ಯುವತಿಯ ಜೊತೆ ಮಾತನಾಡುತ್ತಿದ್ದ ನಂತರ ಈ ಕೃತ್ಯ ಎಸಗಿದ್ದಾನೆ. ಮಾತುಕತೆ ನಡುವೆ ಉದ್ರಿಕ್ತನಾದ ಯುವಕ ಯುವತಿಯ ದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಘಟನೆಯನ್ನು ಅರಿತ ಸ್ಥಳೀಯರು ತಲುಪುವಷ್ಟರಲ್ಲಿ ಯುವಕ ಕೃತ್ಯವೆಸಗಿ ಪರಾರಿಯಾಗಿದ್ದಾನೆ ಎಂದು ಕೆಲ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕ ಪರಾರಿಯಾಗಿದ್ದು ಯುವತಿಯ ಸಹೋದರ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕೇಸು ದಾಖಲಿಸಿ ಓರ್ವನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.