ಆದಿತ್ಯ ಹೆಗ್ಡೆ ಅವರು ದೇಶದಾದ್ಯಂತದ ಫೋನ್ ಕರೆಗಳನ್ನು ರಕ್ತ ಬೇಕೇ ಎಂದು ಕೇಳಿಕೊಳ್ಳುತ್ತಿದ್ದಾರೆ. ಆದರೆ ಡಿಸೆಂಬರ್ 18 ರಂದು ಅವರಿಗೆ ಒಂದು ತುರ್ತು ಕರೆ ಬಂತು. 21 ವರ್ಷದ ಗರ್ಭಿಣಿ ಮಹಿಳೆಗೆ ರಕ್ತದ ಅವಶ್ಯಕೆತೆ ಇತ್ತು. 34 ರ ಹರೆಯದ ಆದಿತ್ಯ ಶೀಘ್ರವಾಗಿ ಚೆನೈಗೆ ಟಿಕೆಟ್ ಪಡೆದು ಎಗ್ಮೋರ್ನಲ್ಲಿರುವ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡಿದರು. ರಕ್ತದಾನ ಎಲ್ಲರೂ ಮಾಡುತ್ತಾರೆ ಆದರೆ ಆದಿತ್ಯರ ರಕ್ತಕ್ಕೆ ವಿಶೇಷತೆ ಇದೆ.
ಆದಿತ್ಯರದ್ದು ಅತಿ ಅಪರೂಪದ ರಕ್ತದ ಪ್ರಕಾರ. ಹೆಚ್ಎಚ್ ನೆಗೆಟಿವ್ ರಕ್ತ ಅವರದ್ದು. ಇದನ್ನು ಬಾಂಬೆ ಫಿನೋಟೈಪ್ ಎಂದೂ ಕರೆಯುತ್ತಾರೆ – ಇದು ಭಾರತದಲ್ಲಿ 10,000 ಜನರಲ್ಲಿ ಒಬ್ಬರಿಗೆ ಮತ್ತು ಯುರೋಪ್ನಲ್ಲಿ ಒಂದು ಮಿಲಿಯನ್ ಜನರಲ್ಲಿ ಒಬ್ಬರಲ್ಲಿ ಇರುತ್ತದೆ.
ಇದರಿಂದ ಆದಿತ್ಯರಿಗೆ ಯಾವುದೇ ಮುಜುಗರ ದುಃಖ ಇಲ್ಲ. ಸೋಮವಾರ ಆದಿತ್ಯ ರಕ್ತದ ಒಂದು ಘಟಕವನ್ನು ದಾನ ಮಾಡಿ, ಮಂಗಳವಾರ ಬೆಂಗಳೂರಿನಲ್ಲಿ ಎಂದಿನಂತೆ ಕೆಲಸ ಮುಂದುವರಿಸಿದರು. ಅವರಿಗೊಂದು ಸೆಲ್ಯೂಟ್ ನೀಡಲೇ ಬೇಕು