ಅಲೋಕ್ ಸಾಗರ್ ದಿಲ್ಲಿ ಐಐಟಿಯಲ್ಲಿ ಇಂಜಿನಿಯರಿಂಗ್ ಕಲಿತ ಬಳಿಕ ಅಮೆರಿಕದ ಪ್ರಸಿದ್ಧ ಹ್ಯೂಸ್ಟನ್ ಯುನಿವರ್ಸಿಟಿಯಲ್ಲಿ ಕಲಿಕೆ ಮುಂದುವರಿಸಿದವರು. ಆದರೆ ಇಂದು ಮಧ್ಯಪ್ರದೇಶದ ಸಣ್ಣ ಗ್ರಾಮದಲ್ಲಿ ಆದಿವಾಸಿ ಮಕ್ಕಳಿಗೆ ಕಲಿಸುತ್ತಿದ್ದಾರೆ. ಶಂಕಿತ ವ್ಯಕ್ತಿ ಎಂದು ಅಲೋಕ್ ಸಾಗರ್‍ರನ್ನು ಗುಪ್ತಚರ ಪೊಲೀಸರು ಅವರಲ್ಲಿ ಹೆಸರನ್ನು ಕೇಳಿದ್ದರು. ಅವರ ಹೆಸರು ಮತ್ತು ಅವರ ವಿದ್ಯಾಭ್ಯಾಸ ಮಟ್ಟವನ್ನು ತಿಳಿದು ಅವರು ದಂಗಾದರು. ಅವರ ಜೀವನ ರೀತಿ ನೋಡಿ ಆಶ್ಚರ್ಯಗೊಂಡರು.
ಐಐಟಿ ದೆಹಲಿಯಲ್ಲಿ ಬೋಧಿಸುವಾಗ, ಅಲೋಕ್ ಹಲವಾರು ವಿದ್ಯಾರ್ಥಿಗಳನ್ನು ರೂಪಿಸಿದ್ದಾರೆ. ಮಾಜಿ ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಒಬ್ಬರು. ಅವರ ಕೆಲಸದಿಂದ ರಾಜೀನಾಮೆ ನೀಡಿದ ನಂತರ, ಅಲೋಕ್ ಮಧ್ಯಪ್ರದೇಶದ ಬೇತುಲ್ ಮತ್ತು ಹೋಶಂಗಾಬಾದ್ ಜಿಲ್ಲೆಗಳಲ್ಲಿ ಬುಡಕಟ್ಟಿ ಜನಾಂಗಕ್ಕಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಕಳೆದ 26 ವರ್ಷಗಳಿಂದ ಅವರು 750 ಕ್ಕೂ ಅಧಿಕ ಬುಡಕಟ್ಟು ಜನಾಂಗದವರಿರುವ ಕೊಚಮು ಎಂಬ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ವಿದ್ಯುತ್ ಮತ್ತು ರಸ್ತೆಗಳು ಇಲ್ಲದ ಆ ಪ್ರದೇಶದಲ್ಲಿ ಅವರು ಪ್ರಾಥಮಿಕ ಶಾಲೆ ನಡೆಸುತ್ತಿದ್ದಾರೆ.
ತಳ ಮಟ್ಟದಲ್ಲಿ ಕೆಲಸ ಮಾಡುವ ಮೂಲಕ ಜನರು ದೇಶದ ಸೇವೆಯನ್ನು ಉತ್ತಮವಾಗಿ ನಿರ್ವಹಿಸಬಹುದು ಎಂದು ನಂಬುತ್ತಾರೆ. “ಭಾರತದಲ್ಲಿ, ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಆದರೆ ಜನರಿಗೆ ಸೇವೆ ಸಲ್ಲಿಸುವುದಕ್ಕಿಂತ ಹೆಚ್ಚಾಗಿ ತಮ್ಮ ಪದವಿಗಳನ್ನು ತೋರಿಸುವಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಾರೆ.
1990ರಿಂದ ಬೈತೂಲ್ ಜಿಲ್ಲೆಯ ಒಂದು ಸಣ್ಣ ಆದಿವಾಸಿಗ್ರಾಮದಲ್ಲಿ ಜೀವನ ನಡೆಸುತ್ತಿರುವ ಅವರು ತಮ್ಮ ಶೈಕ್ಷಣಿಕ ಯೋಗ್ಯತೆಗಳನ್ನು ಅಡಗಿಸಿಟ್ಟಿದ್ದಾರೆ. ಕಾಡನ್ನು ಹಸಿರಿನಂದಾವೃತಗೊಳಿಸುವ ಅಭಿಯಾನದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದು, ಆ ಪ್ರದೇಶದಲ್ಲಿ 50,000 ಕ್ಕಿಂತ ಹೆಚ್ಚು ಮರಗಳನ್ನು ನೆಟ್ಟಿದ್ದಾರೆ.
ತನ್ನ ಉನ್ನತ ಶಿಕ್ಷಣ ಸಾಧನೆ ಇತತರ ಜೊತೆ ಬೆರೆಯುವುದಕ್ಕೆ ಅಡ್ಡಿ ಅಗದಿರಲೆಂದು ಅದನ್ನು ಅವರು ಅಡಗಿಸಿಟ್ಟಿದ್ದಾರೆ.
ಅವರ ಬಳಿ ಕೇವಲ ಮೂರು ಕುರ್ತಾಗಳಿವೆ. ಮತ್ತು ಒಂದು ಸೈಕಲ್ ಇದೆ. ಅವರು ಹಲವಾರು ಭಾಷೆಗಳನ್ನು ಮಾತಾಡುತ್ತಾರೆ. ಒಂದು ಹಿಂದಿ ವೆಬ್‍ಸೈಟ್‍ನಲ್ಲಿ ಪ್ರಕಟವಾದ ವರದಿ ಪ್ರಕಾರ ಅಲೊಕ್ ಸಾಗರ್‍ರ ಸಣ್ಣ ತಮ್ಮ ಈಗಲೂ ಐಐಟಿಯಲ್ಲಿ ಪೊಫೆಸರ್ ಆಗಿದ್ದಾರೆ. ಅವರ ತಾಯಿ ಮಿರಂಡ್ ಹೌಸ್‍ನಲಿ ಫಿಸಿಕ್ಸ್ ಪ್ರೊಫೆಸರ್ ಆಗಿದ್ದರು. ತಂದೆ ರೆವೆನ್ಯೂ ಸರ್ವೀಸ್‍ನಲ್ಲಿ ಅಧಿಕಾರಿ ಆಗಿದ್ದಾರೆ. ಇಂತಹ ಸ್ಪೂರ್ತಿದಾಯಕ ವ್ಯಕ್ತಿ ನಮ್ಮೆಲ್ಲರಿಗೆ ಪ್ರೇರಣೆಯಾಗಿದ್ದಾರೆ
Home ಬದುಕು/Life ರಿಸರ್ವ್ ಬ್ಯಾಂಕ್ ಗವರ್ನರ್ ಮತ್ತು ಹಲವು ಐಐಟಿ ವಿದ್ಯಾರ್ಥಿಗಳಿಗೆ ಕಲಿಸಿದ ಪ್ರೊಫೆಸರ್ ಈಗ ಹೀಗಿದ್ದಾರೆ ನೋಡಿ!