ವಿರಾಟ್ ಕೋಹ್ಲಿ ಮತ್ತು ಅನುಷ್ಕಾ ಶರ್ಮಾ ಮದುವೆಯಾದ ನಂತರ ಸೋಷಿಯಲ್ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಹನಿಮೂನ್ ಚಿತ್ರ ವಿಶ್ವದೆಲ್ಲೆಡೆ ವೈರಲ್ ಆಗಿದೆ.
ಮಾತ್ರವಲ್ಲ, ಹನಿಮೂನ್ ಸ್ಥಳವನ್ನು ಉಲ್ಲೇಖ ಮಾಡದೆ ಪೋಸ್ಟ್ ಮಾಡಿದ್ದ ಫೋಟೊವನ್ನು ಜನರು ಎಡಿಟ್ ಮಾಡಿ ಸ್ಥಳಗಳ ಹೆಸರನ್ನು ಹಾಕುತ್ತಿದ್ದಾರೆ.
ಈ ಬಗ್ಗೆ ಎದ್ದಿರುವ ಕುತೂಹಲದ ಹಿನ್ನೆಲೆಯಲ್ಲಿ ಸಾರ್ವಜನಿಕ ಜಾಲತಾಣಗಳಲ್ಲಿ ಭಾರೀ ಅಣಕಗಳು ವ್ಯಕ್ತವಾಗಿದೆ. ಫಿನ್ಲೆಂಡ್ನಲ್ಲಿದ್ದಾಗ ಜತೆಯಾಗಿ ತೆಗೆದು ಇನ್ಸ್ಟಾಗ್ರಾಂನಲ್ಲಿ ಹಾಕಿದ್ದ ಸೆಲ್ಪಿ ಸಾಮಾಜಿಕ ಜಾಲತಾಣ ವೈರಲ್ ಆದ ಬೆನ್ನಲ್ಲೇ ಅವರ ಅಭಿಮಾನಿಗಳು ‘ಫೋಟೋಶಾಪ್’ ಬಳಸಿ ಹರಡುತ್ತಿರುವ ಚಿತ್ರಗಳು ಅಚ್ಚರಿದಾಯಕ ಆಗಿವೆ.
ಕರ್ನಾಟಕದ ತುಮಕೂರು ರೈಲ್ವೆ ನಿಲ್ದಾಣದ ಬಳಿ ಕೂಡ ಚಿತ್ರಗಳು ಎಡಿಟ್ ಮಾಡಿ ಪ್ರದರ್ಶಿಸಲಾಗಿದೆ.