ಮದುವೆ ಸ್ವರ್ಗದಲ್ಲಿ ತೀರ್ಮಾನವಾಗುತ್ತದೆ ಎಂದು ಹೇಳಲಾಗುತ್ತದೆ..
ಈ ಮದುವೆ ನಗರದ ಆಸ್ಪತ್ರೆಯ ಕಾನ್ಫರೆನ್ಸ್ ಕೊಠಡಿಯಲ್ಲಿ ನಡೆಯಿತು.
ಸೌದಿ ಅರೇಬಿಯ ದಮ್ಮಾಮ್ನಲ್ಲಿ ಕೆಲಸ ಮಾಡುವ ಮೆಕ್ಯಾನಿಕಲ್ ಇಂಜಿನಿಯರ್ ಎಂ.ಡಿ. ಶಾಹನಾವಾಸ್ ಆಲಂ ಮತ್ತು ವಕೀಲೆ ಹೇಯರಾ ಜಾವೇದ್ ಆಸ್ಪತ್ರೆಯಲ್ಲಿ ಮದುವೆಯಾದ ದಂಪತಿಗಳು.
ಅವರ ಮದುವೆಯನ್ನು ಯುನೈಟೆಡ್ ಅರಮನೆಯಲ್ಲಿ ಆಯೋಜಿಸಲಾಗಿತು. ಆದರೆ ಒಂದು ದಿನ ಮುಂಚೆ, ವೈದ್ಯಕೀಯ ತುರ್ತು ಪರಿಸ್ಥಿತಿಯ ಕಾರಣದಿಂದ ಹೆಯಾರಾ ಆಸ್ಪತ್ರೆಗೆ ದಾಖಲಾದರು. ಆದರೆ ವಿವಾಹ ನಿಂತು ಹೋಗಲಿಲ್ಲ. ವರನ ಕುಟುಂಬಿಕರು ಆಸ್ಪತ್ರೆಗೆ ಬಂದು ನಿಕಾಹ್ ಆದರು.
“ಎಲ್ಲರೂ ಅವನನ್ನು ‘ವಿವಾಹ್’ ಸಿನೆಮಾದ ಶಾಹಿದ್ ಕಪೂರ್ ಗೆ ಹೋಲಿಸುತ್ತಿದ್ದಾರೆಂಬುದು ನನಗೆ ತಿಳಿದಿದೆ.ನನಗೆ ಸಂತೋಷ ಮತ್ತು ದುಃಖವಿದೆ. ಮದುವೆ ಅದೇ ದಿನ ನಡೆಯಿತು ಎಂಬುದಕ್ಕೆ ಸಂತಸವಿದೆ. ಆದರೆ ಹೇಗೆ ನಡೆಯಬೇಕಿತ್ತೋ ಹಾಗೆ ನಡೆಯಲಿಲ್ಲ ಎಂಬ ಬಗ್ಗೆ ಖೇದ ಇದೆ” ಎಂದು ವಕೀಲೆ ಹೇಯರಾ ಹೇಳಿದರು.