ಕೊಪ್ಪಳ: ಜಾತ್ಯತೀತತೆ ಕುರಿತು ಸಂವಿಧಾನ ಹೇಳಿದೆ, ಸಂವಿಧಾನಕ್ಕೆ ಗೌರವ ಕೊಡುತ್ತೇವೆ. ಆದರೆ, ಸಂವಿಧಾನ ಕೂಡಾ ಕಾಲಕ್ಕೆ ತಕ್ಕಂತೆ ಎಷ್ಟೋ ಬಾರಿ ಬದಲಾಗಿದೆ. ಮುಂದಿನ ದಿನಗಳಲ್ಲೂ ಕೂಡ ಬದಲಾಗುತ್ತದೆ. ಆ ಸಂವಿಧಾನವನ್ನು ಬದಲಾಯಿಸುವುದಕ್ಕಾಗಿಯೇ ನಾವು ಇರುವುದು, ಬಂದಿರುವುದು’ ಕೇಂದ್ರ ಉದ್ಯೋಗ ಮತ್ತು ಕೌಶಲ ಅಭಿವೃದ್ಧಿ ಸಚಿವ ಅನಂತಕುಮಾರ್‌ ಹೆಗಡೆ ಹೇಳಿದ್ದು, ಅವರ ಭಾಷಣದ ವಿಡಿಯೋ ವೈರಲ್ ಆಗಿದೆ.
ಯಲಬುರ್ಗಾ ತಾಲ್ಲೂಕು ಕುಕನೂರಿನ ಮಹಾಮಾಯಿ ದೇವಸ್ಥಾನದಲ್ಲಿ ಬ್ರಾಹ್ಮಣ ಯುವ ಪರಿಷತ್ತಿನ ಮಹಿಳಾ ಸಂಘ, ವೆಬ್‌ಸೈಟ್ ಉದ್ಘಾಟಿಸಿ ಭಾನುವಾರ ಅವರು ಮಾತನಾಡುತ್ತಿದ್ದರು.

‘ಈಗ ಹೊಸ ಸಂಪ್ರದಾಯ ಬಂದು ಬಿಟ್ಟಿದೆ, ಜಾತ್ಯತೀತರು ಎನ್ನುವುದು. ಯಾರಾದರು ನಾನೊಬ್ಬ ಮುಸ್ಲಿಂ, ಕ್ರಿಶ್ಚಿಯನ್‌, ಲಿಂಗಾಯತ, ಬ್ರಾಹ್ಮಣ, ಹಿಂದೂ ಎಂದರೆ ಖುಷಿಯಾಗುತ್ತದೆ. ಏಕೆಂದರೆ ಆತನಿಗೆ ತನ್ನ ರಕ್ತದ ಪರಿಚಯ ಇದೆ ಎಂದರ್ಥ. ಆದರೆ, ಈ ಜಾತ್ಯತೀತರು ಅಂತ ಕರೆದುಕೊಳ್ಳುವವರಿಗೆ ಯಾರು ಅಂತ ಕರೆಯಬೇಕೋ ಗೊತ್ತಾಗುತ್ತಿಲ್ಲ. ಅಪ್ಪ ಅಮ್ಮನ ಗುರುತೇ ಇಲ್ಲದ ರಕ್ತವನ್ನ ಜಾತ್ಯತೀತರು ಅಂತ ಕರೆದುಕೊಳ್ಳುತ್ತಾರೆ’ ಎಂದು ಗೇಲಿ ಮಾಡಿದ್ದಾರೆ.

Leave a Reply