ಹುಬ್ಬಳ್ಳಿ: ‘ಹನುಮನ ಪೂಜೆ ಮಾಡುವುದಿಲ್ಲ, ಟಿಪ್ಪು ಸುಲ್ತಾನನ ಪೂಜೆ ಮಾಡಲಾಗುತ್ತಿದೆ. ಇದು ಮನಸ್ಥಿತಿಯ ಅಂತರವನ್ನು ಸೂಚಿಸುತ್ತದೆ.
(Hanuman ji ki pooja nahi karte, Tipu Sultan ki pooja kar rahe hain. Yeh maansikta ka antar hai)
ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಗುರುವಾರ ನಡೆದ ಬಿಜೆಪಿ ಪರಿವರ್ತನಾ ರ‍್ಯಾಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ನಮ್ಮದು ಆಧ್ಯಾತ್ಮಿಕ, ಧಾರ್ಮಿಕ ಪರಂಪರೆಯ, ಸಾಧು– ಸಂತರ, ಪುಣ್ಯ ಪುರುಷರ ದೇಶ. ಇಲ್ಲಿ ರಾಮ ಭಕ್ತ ಹನುಮಾನ್ ಪೂಜಿಸಬೇಕೇ ಹೊರತು ಟಿಪ್ಪು ಸುಲ್ತಾನನನ್ನಲ್ಲ’ ಎಂದು ಅವರು ಹೇಳಿದರು.
ಅವರು, ‘ಜಾತಿಯನ್ನು, ಸಮಾಜವನ್ನು ಒಡೆದು ಆಳುವ ನೀತಿಯನ್ನು ಅನುಸರಿಸುವ ಕಾಂಗ್ರೆಸ್ ಗುಜರಾತ್‌ನ ಜನ ಸರಿಯಾದ ಹೊಡೆತ ಕೊಟ್ಟಿದ್ದಾರೆ. ಕರ್ನಾಟಕದ ಜನರೂ ಕಾಂಗ್ರೆಸ್‌ಗೆ ಅದೇ ರೀತಿ ಪಾಠ ಕಲಿಸಬೇಕು’ ಎಂದು ಹೇಳಿದರು.
‘ರಾಜ್ಯದಲ್ಲಿ ಹಿಂದೂ ಸಂಘಟನೆಗಳ, ಬಿಜೆಪಿ ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರ ಗೋಮಾಂಸ ಭಕ್ಷಕರ ಪರ ವಕಾಲತ್ತು ವಹಿಸುತ್ತಿದೆ. ಆಹಾರ ಅವರವರ ಹಕ್ಕು ಎಂದು ಹೇಳುತ್ತಿದೆ. ಯಾವುದೇ ಸರ್ಕಾರವಾದರೂ ಸಾಮಾನ್ಯ ಜನರ ಭಾವನೆಗೆ ಬೆಲೆ ಕೊಡಬೇಕು’ ಎಂದು ಯೋಗಿ ಹೇಳಿದರು.