Dara-Singh-Indias-Hanuman.jpg


ಹೌದು..ನಾವು ಶಾಲೆಗೆ ಹೋಗುತ್ತಿದ್ದ ಆ ನೆನಪು ಯಾವ ರೀತಿ ಸವಿಯೋ ಅದೇ ರೀತಿ ಆ ಆದಿತ್ಯವಾರ ಯಾವಾಗ ಬರುತ್ತೇ ಎಂದು ಕಾದು ಕುಳಿತಿರುತ್ತಿದ್ದ ನಮಗೆ ಆ ‘ರಾಮಯಾಣ’ದ ರವಿವಾರವೂ ಕೂಡಾ ಈಗಲೂ ಸವಿ ಸವಿ ನೆನಪೇ..ಹೌದು..ದೂರದರ್ಶನದಲ್ಲಿ 1988, 2008ರ ಟಿವಿ ಧಾರಾವಾಹಿಗಳಲ್ಲಿ ದಾಖಲೆಗಳ ಮೇಲೆ ದಾಖಲೆಯನ್ನು ಬರೆದಿದ್ದ ರಾಮನಂದ ಸಾಗರ್‌ರ ‘ರಾಮಯಾಣ’ ಎಂಬ ಐತಿಹಾಸಿಕ ಧಾರವಾಹಿಯ ಮೋಹಕ್ಕೊಳಗಾದ 100 ಮಿಲಿಯನ್ ವೀಕ್ಷಕರಲ್ಲಿ ನಾನು ಒಬ್ಬ..ಅದರಲ್ಲಿ ‘ಹನುಮಾನ್’ ಪಾತ್ರದಲ್ಲಿ ಮನಸೂರೆಗೊಂಡಿದ್ದ ದಾರಾ ಸಿಂಗ್ 2012 ರಲ್ಲಿ ತೀರಿಹೋದರು.

ದಾರಾ ಸಿಂಗ್..

ರಾಮನಂದ್ ಸಾಗರ್‌ರ ‘ರಾಮಯಾಣ’ ಧಾರಾವಾಹಿಯನ್ನ ಮೇರು ಎತ್ತರಕ್ಕೇರಿಸಿದ ಕೀರ್ತಿ ದಾರಾ ಸಿಂಗ್‌ಗೆ ಸಲ್ಲಬೇಕು..ಅವರ ಸುಂದರ ಮೈಕಟ್ಟು, ಗಾಂಭೀರ್ಯತೆ ಹೊಂದಿದ ವ್ಯಕ್ತಿತ್ವ, ನೇರ ನುಡಿ ಇವತ್ತಿಗೂ ನಮ್ಮನ್ನು ಸೆಳೆದಿಡುತ್ತೆ..ಸಂಪೂರ್ಣ ರಾಮಯಾಣದಲ್ಲಿ ದಾರಾ ಸಿಂಗ್‌ರೇ ತುಂಬಿಕೊಂಡಿದ್ದು ಅವರ ನಟನೆಯ ಹಿಂದಿನ ಪರಿಶ್ರಮವೇ ಸಾಕ್ಷಿ..ಯಾವ ರೀತಿ ರಾಮಯಾಣ ಪ್ರಸಾರವಾಗುವ ಆದಿತ್ಯವಾರ ಬಂದು ಬಿಟ್ಟಿತೋ ಅಂದು ರಸ್ತೆಯಲ್ಲಿ ವಾಹನಗಳೇ ಸಾಗುತ್ತಿರಲಿಲ್ಲ..ಹಳ್ಳಿಯ ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿತ್ತು..ಶಾಲಾ ಮಕ್ಕಳು, ವಯೋವೃದ್ಧರು ಜೈಶ್ರೀರಾಮ್ ಎಂದು ಹೇಳಿ ಬರುತ್ತಿದ್ದ ‘ರಾಮಯಾಣ’ ಧಾರಾವಾಹಿ ನೋಡಲು ತುದಿಗಾಲಲ್ಲಿ ನಿಲ್ಲುತ್ತಿದ್ದರು..ಇದರಿಂದಲೇ ಈ ಧಾರಾವಾಹಿ ಲಿಮ್ಕಾ ದಾಖಲೆ ಬರೆಯಿತು..

ರಾಮಯಾಣದ ಮೂಲಕ ದೂರದರ್ಶನ ಜನರ ಮನೆಮಾತಾದರೆ ಇನ್ನೊಂದೆಡೆ ದಾರಾ ಸಿಂಗ್ ಕೂಡಾ ದೇಶದ ಜನರ ಮನ ತಟ್ಟಿದರು..ಹಿಂದಿ ಗೊತ್ತಿಲ್ಲದ ಜನರು ಕೂಡಾ ಈ ಧಾರಾವಾಹಿಯ 78 ಸಂಚಿಕೆಗಳನ್ನು ನೋಡಿ ಮುಗಿಸಿದರೂ ರಾಮಯಾಣದ ಪ್ರಭಾವ ಮರೆಯಾಗಿರಲಿಲ್ಲ..ಅದರಲ್ಲೂ ಶಾಲಾ ಮಕ್ಕಳು ಭಾರೀ ಪ್ರಭಾವಕ್ಕೊಳಗಾಗಿದ್ದು ಮತ್ತೊಂದು ವಿಶೇಷ..ಇದರಿಂದಲೇ 2008ರ ಅವಧಿಯಲ್ಲಿ ಎನ್‌ಡಿಟಿವಿ ಇಮೇಜನ್ ಚಾನೆಲ್ ‘ರಾಮಯಾಣ’ವನ್ನು ಮರು ಪ್ರಸಾರ ಮಾಡಿದಾಗ ಕಾದು ಕುಳಿತು ನೋಡಿದ ಆ ಮರೆಯಾದ ಸಮಯ ಮತ್ತೆ ಬಾರದೇಕೆ ಎಂದು ಮನಸ್ಸು ಒಮ್ಮೆ ಯೋಚಿಸುತ್ತದೆ..ಈಗಲೂ ಈ ಧಾರಾವಾಹಿಯನ್ನ ಮತ್ತೆ ಮತ್ತೆ ನೋಡಬೇಕಿನಿಸುತ್ತದೆ..ಕಾರಣ ದಾರಾ ಸಿಂಗ್‌ರ ಅದ್ಬುತ ನಟನೆ..ರಾಮಾಯಣದ ಕಥೆಯನ್ನು ಜನರಿಗೆ ಅಭಿನಯದ ಮೂಲಕ ತೆರೆಯಪಡಿಸುವುದೇ ಸಾಹಸಕಾರಿ ಕಾರ್ಯವಾದರೂ ಅದನ್ನು ತನ್ನ ಮೇರು ನಟನೆಯ ಮೂಲಕ ಹಿಂದೂ ಧರ್ಮದ ಐತಿಹಾಸಿಕ ನೆಲೆಯನ್ನ ಜನರಿಗೆ ತಿಳಿಯಪಡಿಸಿದ್ದು ದಾರಾ ಸಿಂಗ್‌ರ ಅದ್ಬುತ ಕಲೆಗಾರಿಕೆ ಏನೆಂಬುದನ್ನು ನಮಗೆ ತಿಳಿಸಿಕೊಡುತ್ತದೆ..

ಹೀಗೆ ತೆರೆ ಮೇಲೆ ಐದು ದಶಕಗಳ ಕಾಲ ನಟನೆ ಮಾಡಿ ಇತಿಹಾಸ ನಿರ್ಮಿಸಿದ ದಾರಾ ಸಿಂಗ್ ಕುಸ್ತಿಪಟುವಾಗಿ ಗುರುತಿಸಿಕೊಂಡವರು…ಕಠಿಣ ಮನಸ್ಸನ್ನು ಹೊಂದಿದ್ದ ದಾರಾ ಸಿಂಗ್ ಕುಸ್ತಿ, ಸಿನಿಮಾಕ್ಕಿಂತ ಹೆಚ್ಚಾಗಿ ರಾಮಯಾಣದ ಮೂಲಕ ಜನರಿಗೆ ಹತ್ತಿರವಾಗಿದ್ದರೆಂಬುದು ಸತ್ಯ..ಆರಂಭಿಕ ಹಂತದಲ್ಲಿ ಬಾಲಿವುಡ್‌ನಲ್ಲಿ ಆಕ್ಷನ್ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದ ದಾರಾ ಸಿಂಗ್ ಕಳೆದ 2007ರಲ್ಲಿ ಬಿಡುಗಡೆಗೊಂಡ ‘ಜಬ್ ವೇ ಮೆಟ್’ ಬಾಲಿವುಡ್ ಚಿತ್ರದಲ್ಲಿ ಕರೀನಾ ಕಪೂರ್‌ಳರ ಅಜ್ಜನ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದರು..

ಎರಡು ಮದುವೆಯಾಗಿರೋ ದಾರಾಸಿಂಗ್ ತನ್ನ ಎರಡು ಪತ್ನಿಯರೊಂದಿಗೆ ಸುಂದರ ಜೀವನ ನಡೆಸಿದ್ರು..ಸದಾ ತನ್ನ ಕುಟುಂಬಿಕರ ಬಗ್ಗೆ ಚಿಂತಿಸುತ್ತಿದ್ದ ದಾರಾ ಸಿಂಗ್ ಇನ್ನ ಇಳಿವಯಸ್ಸಿನಲ್ಲಿ ಮನೆಯಲ್ಲಿರಬೇಕೆಂದು ಆಶಿಸಿದವರು..ಮೊದಲ ಪತ್ನಿಯಲ್ಲಿ ಓರ್ವ ಮಗ ಹಾಗೂ ದ್ವಿತೀಯ ಪತ್ನಿಯಲ್ಲಿ ಇವರಿಗೆ ಐದು ಮಕ್ಕಳಿದ್ದಾರೆ.. ತನ್ನ ಎತ್ತರದ ದೇಹದಿಂದಲೇ ಜನಪ್ರಿಯಗೊಂಡಿದ್ದ ಇವರಿಗೆ ಇದುವೇ ಚಿತ್ರಗಳಲ್ಲಿ, ಧಾರಾವಾಹಿಗಳಲ್ಲಿ ನಟಿಸಲು ಸಹಕಾರ ನೀಡಿತು..ಇಂದಿಗೂ ಆ ರಾಮಯಾಣದ ಹನುಮ ಯಾರು ಅಂತಾ ಪ್ರಶ್ನೆಗೆ ಕೆಲವರಿಗೆ ಉತ್ತರ ಸಿಕ್ಕಿಲ್ಲ..500 ಕ್ಕೂ ಹೆಚ್ಚು ಕುಸ್ತಿ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಸಿನಿಮಾದಲ್ಲೂ ಮಾಡಿದ ಸಾಧನೆಯನ್ನು ಕುಸ್ತಿಯಲ್ಲೂ ಮಾಡಿದ್ದರು..ವಿಶೇಷವೆಂದರೆ ಕುಸ್ತಿಯಲ್ಲಿ ನೀಡಲಾಗುವ ‘ರುಸ್ತಮೆ ಪಂಜಾಬ್’ ಹಾಗೂ ‘ರುಸ್ತಮೆ ಹಿಂದ್’ ಹೀಗೆ ಮುಂತಾದ ಪದವಿಗಳನ್ನು ದಾರಾಸಿಂಗ್ ಪಡೆದಿದ್ದಾರೆ..1959ರಲ್ಲಿ ಕಾಮನ್ವೆಲ್ತ್ ಚಾಂಪಿಯನ್ ಆಗಿದ್ದ ಇವರು 1996ರಲ್ಲಿ ಕುಸ್ತಿ ತೀರ್ಪುಗಾರರಾಗಿದ್ದರು,..1983ರಲ್ಲಿ ಕುಸ್ತಿಗೆ ನಿವೃತ್ತಿ ಘೋಷಿಸಿದರು..ತೂಫಾನ್, ಬಲರಾಮ್ ಶ್ರೀಕೃಷ್ಣ, ದೋ ದುಶ್ಮಾನ್, ರಾಮಯಾಣ, ದಾದಾ, ಕಲ್ ಹೋ ನಾವೋ,ಬೋರ್ಡಾರ್ ಹಿಂದೂಸ್ತಾನ್ ಕಾ, ಶರಾರತ್, ಫರ್ಝ್, ದುಲನ್ ಹಮ್ ಲೇ ಜಾಯೆಂಗೆ, ದಿಲ್ಲಗಿ, ಜುಲ್ಮಿ ಚಿತ್ರದಲ್ಲಿನ ಇವರ ನಟನೆಯನ್ನು ಮತ್ತೆ ಮತ್ತೆ ನೋಡಬೇಕಿನಿಸುತ್ತದೆ..ನಟಿ ಮುಮ್ತಾಜ್‌ರೊಂದಿಗೆ ಅತಿ ಹೆಚ್ಚು ನಟನೆ ಮಾಡಿದ ದಾರಾ ಸಿಂಗ್ ಬಾಲಿವುಡ್‌ನ ಯಶಸ್ವಿ ಜೋಡಿಗಳೆಂದು ಗುರುತಿಸಿಕೊಂಡವರು..ಇದರಲ್ಲಿ ಫೌಲಾದ್, ವೀರ್ ಭೀಮ್‌ಸೇನ್, ಹರ್ಕ್ಯುಲಸ್, ರುಸ್ತಮೆ ಹಿಂದ್, ಆಂದಿ ಔರ್ ತೂಫಾನ್ ಚಿತ್ರಗಳಲ್ಲಿ ದಾರಾ-ಮುಮ್ತಾಜ್ ನಟನೆ ಬಾಲಿವುಡ್‌ನಲ್ಲಿ ಇವರಂತಹ ನಟರೂ ಇನ್ನೂ ಬರಲಿಕ್ಕಿಲ್ಲ ಎಂಬಂತಿದೆ..



ದಾರಾ ಸಿಂಗ್ ಸಹಜವಾಗಿಯೇ ಕುಸ್ತಿಪಟು ಆಗಿದ್ದರಿಂದ ಇವರು ತಮ್ಮ ಚಿತ್ರಗಲ್ಲಿ ಆಕ್ಷನ್ ಅನ್ನು ಅದ್ಬುತವಾಗಿ ಮಾಡುವುದಕ್ಕೆ ಸಹಕಾರ ನೀಡಿತು ಎಂದು ಹೇಳಬಹುದು..ದಿಲೀಪ್, ರಾಜ್‌ಕಪೂರ್, ದೇವಾನಂದ್ ಬಾಲಿವುಡ್‌ನಲ್ಲಿ ಭದ್ರವಾಗಿ ಬೇರೂರುತ್ತಿದ್ದ ಕಾಲದಲ್ಲಿ ದಾರಾ ಸಿಂಗ್ ಬಾಲಿವುಡ್‌ನಲ್ಲಿ ತನ್ನದಾದ ಛಾಪನ್ನು ಮೂಡಿಸಿದ್ದು ಇವರ ಮೇರು ನಟನೆಯ ಪ್ರಭಾವ ಎಷ್ಟಿದೆ ಯೆಂಬುದನ್ನ ನಮಗೆ ಅರಿವು ಮಾಡಿಸುತ್ತದೆ..ರಾಜ್ಯಸಭೆಗೆ ಬಿಜೆಪಿ ಪಕ್ಷದಿಂದ ನಾಮಾಂಕಿತರಾದ ಪ್ರಥಮ ಕ್ರೀಡಾಪಟು ಇವರು..ಬಾಲಿವುಡ್‌ನ ಪ್ರಥಮ ಆಕ್ಷನ್ ಕಿಂಗ್ ನಾಯಕನಾಗಿರೋ ದಾರಾ ಸಿಂಗ್ 1960-69ರ ಅವಧಿಯಲ್ಲಿ ಮಾಡಿದ ಕ್ರಾಂತಿ ನಿಜಕ್ಕೂ ಇತಿಹಾಸದ ಪುಟದಲ್ಲಿ ದಾಖಲಾಗಿದೆ..ತನ್ನ ಆರಂಭಿಕ ಚಿತ್ರಗಳಲ್ಲಿ ಬಟ್ಟೆ ಬಿಚ್ಚಿ ತನ್ನ ಎಂಟು ಪ್ಯಾಕ್ ಬಾಡಿಯನ್ನು ಪರಿಚಯಿಸಿದವರು ಇವರೇ..ಹೀಗಾಗಿ ಇವರು ಈಗಿನ ಸಿಕ್ಸ್ ಪ್ಯಾಕ್ ನಟರಿಗಿಂತ ಇವರೇ ಮುಖ್ಯವೆನಿಸುತ್ತಾರೆ…ಹೀಗಾಗಿ ಸಲ್ಮಾನ್ ಖಾನ್, ಅಮೀರ್ ಖಾನ್, ಶಾರೂಖ್ ಖಾನ್‌ರ ಟ್ರೈನಿಂಗ್ ಬಾಡಿಗಿಂತ ಇವರ ನ್ಯಾಚುರಲ್ ಬಾಡಿ ವಿಶೇಷವೆಂದೇ ಹಿರಿಯ ನಟರ ಅಭಿಪ್ರಾಯ..1994ರಲ್ಲಿ ರಿಲೀಸ್ ಆದ ಕರಣ್ ಹಾಗೂ 1978ರಲ್ಲಿ ರಿಲೀಸ್ ಆದ ಭಕ್ತಿ ಮೆನ್ ಶಕ್ತಿ ಚಿತ್ರವನ್ನು ಇವರೇ ನಿರ್ದೇಶಿಸಿದ್ದರು.ಇನ್ನೊಂದೆಡೆ ಕುಸ್ತಿಯಲ್ಲಿ ಮಾಡಿದ ಸಾಧನೆಯಿಂದಾಗಿ ಧ್ಯಾನೂ ಭಗತ್, ಸಾವ ಲಕ್ ಸೇ ಎಕ್ ಲಾಡೌನ್, ಭಗತ್ ದನ್ನಾ ಜಟ್ಟ್, ಮೇರಾ ದೇಶ್ ಮೇರಾ ಧರಮ್, ನಾನಕ್ ದುಖಿಯಾ ಸಬ್ ಸಂಸಾರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ..ಹೀಗೆ ಅಪ್ರತಿಮ ಪ್ರತಿಭೆಯನ್ನು ಹೊಂದಿದ್ದ ದಾರಾ ಸಿಂಗ್ ಅಮಿತಾಭ್ ಬಚ್ಚನ್,ದೇವಾನಂದ್‌ರಂತೆ ಮಾಧ್ಯಮಗಳಲ್ಲಿ ಪ್ರಚಾರ ಗಳಿಸದಿದ್ದರೂ ತನ್ನ ನಟನೆಯ ಮೂಲಕ ಜನಮನ್ನಣೆ ಗಳಿಸಿದರು..ಇವತ್ತು ದಾರಾಸಿಂಗ್ ನಮ್ಮನ್ನಗಲಿ ಬಿಟ್ಟು ಹೋಗಿದ್ದರೂ ಅವರ ‘ಹನುಮ’ನ ಪಾತ್ರದ ಮೂಲಕ ಇವರು ಶತಮಾನಗಳ ಕಾಲ ಜೀವಂತವಾಗಿರುತ್ತಾರೆ…

ಲೇಖಕರು: ಶಂಶೀರ್ ಬುಡೋಳಿ

Leave a Reply