ಮಧ್ಯಪ್ರದೇಶ: ಪನ್ನಾಯದ ಮೋತಿಲಾಲ್ ದಿನಗೂಲಿಕಾರ್ಮಿಕನಾಗಿದ್ದು, ದಿನಾಲೂ ಸಿಗುವ ಚಿಕ್ಕ ದಿನಗೂಲಿಯಲ್ಲಿ ದಿನ ದೂಡಲು ಕಷ್ಟಪಡುವ ವ್ಯಕ್ತಿಯಾಗಿದ್ದಾರೆ.ಆದರೆ ಪ್ರಜಾಪತಿಯ ಹಣೆಬರಹ ಒಂದು ದಿನದಲ್ಲಿ ಬದಲಾಯಿತು. ಪ್ರಜಾಪತಿಯ ಸೌಭಾಗ್ಯ ಅರಳಿದ್ದು ಒಂದು ತುಂಡು ಭೂಮಿಯಲ್ಲಿ. ಮಧ್ಯಪ್ರದೇಶದಸರಕಾರಿ ಒಡೆತನದ ವಜ್ರಗಣಿಗಾರಿಕೆದಿನಗೂಲಿಯಾಗಿರುವ ಪ್ರಜಾಪತಿಗೆ ಸರಕಾರ 25 ಚದರಡಿ ಸ್ಥಳವನ್ನುಕೊಟ್ಟಿತ್ತು. ಇದರಲ್ಲಿಪ್ರಜಾಪತಿ ಅಗೆದಾಗ ಒಂದೂವರೆ ಕೋಟಿ ರೂಪಾಯಿ ಬೆಲೆಯ ವಜ್ರ ಸಿಕ್ಕಿದೆ.

ಇಲ್ಲಿ ಪ್ರಜಾಪತಿಗೆ 42.9 ಕ್ಯಾರೆಟ್ ವಜ್ರ ಸಿಕ್ಕಿದೆ.ಇದುನ್ಯಾಶನಲ್ ಮಿನರಲ್ ಡೆವಲಪ್‍ಮೆಂಟ್ ಕಾರ್ಪೊರೇಷನ್‍ನ ವಜ್ರ ಗಣಿಗಾರಿಕೆ ನಡೆಯುವ ಸ್ಥಳದ ಸಮೀಪದಲ್ಲಿರುವ ಸ್ಥಳವಾಗಿದೆ.ಆದರೆ ಇದೇ ಮೊದಲ ಸಲ ಅಲ್ಲ ಇಷ್ಟುದೊಡ್ಡ ವಜ್ರ ಕಾರ್ಮಿಕರಿಗೆ ಸಿಗುವುದು. 1961ರಲ್ಲಿ ಒಬ್ಬ ಕೂಲಿಕಾರ್ಮಿಕನಿಗೆ 44.55ಕ್ಯಾರೆಟ್ ವಜ್ರ ಸಿಕ್ಕಿತ್ತು.ಪ್ರಜಾಪತಿಗೆ ಶುದ್ಧ ವಜ್ರ ಸಿಕ್ಕಿದೆ. ಮುಂದಿನ ದಿವಸ ಸರಕಾರಿನಿಯಮದಂತೆ ಏಲಂ ನಡೆಸಲಾಗುವುದು ಎಂದು ಮೈನಿಂಗ್ ಅಧಿಕಾರಿ ಸಂತೋಷ್ ಸಿಂಗ್ ಹೇಳಿದರು.

ಏಲಂನಲ್ ಸಿಗುವ ಒಟ್ಟು ಮೊತ್ತದಲ್ಲಿ ಶೇ.11ರಷ್ಟು ಪ್ರಜಾಪತಿಗೆ ನೀಡಲಾಗುವುದು.ನಾವು ತಲೆಮಾರುಗಳಿಂದ ಜಮೀನು ಗುತ್ತೆಗೆ ಪಡೆದು ಗಣಿಗಾರಿಕೆ ನಡೆಸುವ ಕುಟುಂಬ ನಮ್ಮದು ಎಂದು ಪ್ರಜಾಪತಿ ಹೇಳಿದರು. ದೇವಾನುಗ್ರಹದಿಂದ ಸಿಕ್ಕಿದ ವಜ್ರ ಇದು.ತನ್ನ ಮಕ್ಕಳ ವಿದ್ಯಾಭ್ಯಾಸ ಮತ್ತು ಒಂದು ಉತ್ತಮ ಮನೆಕಟ್ಟಿಸಲು ಈ ಹಣವನ್ನು ಉಪಯೋಗಿಸುವೆ ಎಂದು ಪ್ರಜಾಪತಿ ಹೇಳಿದರು.

Leave a Reply