ಬೆಂಗಳೂರಿನ ನಾಲ್ಕು ಮಕ್ಕಳು ತಮ್ಮ ಪಾಕೆಟ್ ಮನಿಯನ್ನು ಸರ್ಕಾರಿ ಶಾಲೆಗೆ ದುರಸ್ತಿ ಮಾಡಲು ಸಹಾಯ ಮಾಡಿದ್ದಾರೆ. ನಿಧಿ ಶಂಕರ್ ರೆಡ್ಡಿ, ನೆಹ ರೆಡ್ಡಿ, ಧುರಾ ರೆಡ್ಡಿ ಮತ್ತು ದೀಕ್ಷಿತಾ ರೆಡ್ಡಿ ಅವರು ಸುಮಾರು 1.5 ಲಕ್ಷ ರೂ.ಗಳನ್ನು ಹಣವನ್ನು ಉಳಿಸಿ ಕಲ್ಯಾಣ್ ನಗರ ಸಮೀಪದ ಸರ್ಕಾರಿ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಕಾರ್ಯಕ್ಕೆ ನೀಡಿದರು.

ದೀಕ್ಷಾ ನಾಲ್ಕನೆಯ ತರಗತಿಯ ವಿದ್ಯಾರ್ಥಿಯಾಗಿದ್ದು, ಧ್ರುವ 8 ನೇ ತರಗತಿಯಲ್ಲಿ, ನೇಹಾ ಎಸ್ಎಸ್ಎಲ್ಸಿ ವಿದ್ಯಾರ್ಥಿಯಾಗಿದ್ದು, ನಿಧಿ ಪಿಯುಸಿ ವಿದ್ಯಾರ್ಥಿಯಾಗಿದ್ದಾರೆ.

ಸರ್ಕಾರಿ ಪ್ರೈಮರಿ ಶಾಲೆ ಈಗ ದುರಸ್ತಿಗೊಂಡ ಉತ್ತಮ ಟಾಯ್ಲೆಟ್ ಸೌಲಭ್ಯವನ್ನು ಹೊಂದಿದೆ. ತರಗತಿ ಕೋಣೆಗಳ ಬೆಂಚುಗಳು ಮತ್ತು ಗೋಡೆಗಳಿಗೂ ಬಣ್ಣ ಬಳಿಯಲಾಗಿದೆ.

ನಿಧಿಯ ಮನೆಯ ಕೆಲಸದಾಳುವಿನ ಮಗನಿಂದ ಶಾಲೆಯ ಅವಸ್ಥೆ ತಿಳಿದು ನಿಧಿ ತನ್ನ ಖರ್ಚಿನ ಹಣವನ್ನು ಉಳಿಸಲು ಪ್ರಾರಂಭಿಸಿದಳು. ನಾವು ಉತ್ತಮ ಸೌಲಭ್ಯ ಇರುವ ಶಾಲೆಯಲ್ಲಿ ಕಲಿಯುತ್ತಿದ್ದೇವೆ. ಅವರಿಗೂ ಉತ್ತಮ ಸೌಲಭ್ಯ ಸಿಗಲಿ ಎಂದು ಪಾಕೆಟ್ ಮನಿಯನ್ನು ನಾವು ಉಳಿಸಲು ಪ್ರಾರಂಭಿಸಿದೆವು ಎಂದು ನಿಧಿ ಹೇಳಿದ್ದಾಳೆ.

Leave a Reply