1. ಮಗು ಮತ್ತು ತಾಯಿಯ ಭಾವನಾತ್ಮಕ ಸಂಬಂಧ ಸುದೃಢವಾಗಿರುತ್ತದೆ. ತಾಯಿಯ ಮನಸ್ಸು ಎದೆ ಹಾಲುಣಿಸಿದ ಬಳಿಕ ಅವರ್ಣನೀಯ ಆನಂದವನ್ನು ಪಡೆಯುತ್ತದೆ.

2. ತಾಯಿಯ ಗರ್ಭಾಶಯ ಮತ್ತಿತರ ಅಂಗಗಳು ಗರ್ಭಪೂರ್ವ ಅವಸ್ಥೆಯನ್ನು (ಸಹಜ ಅವಸ್ಥೆಯನ್ನು) ತಲುಪಲು ಸಹಕರಿಸುತ್ತದೆ.

3. ಎದೆ ಹಾಲುಣಿಸುವ ತಾಯಂದಿರಲ್ಲಿ ಸ್ತನರೋಗಗಳು (ಕ್ಯಾನ್ಸರ್) ಕಾಣಿಸಿಕೊಳ್ಳುವ ಸಾಧ್ಯತ ಬೇರೆ ಮಹಿಳೆಯರಿಗಿಂತ ಕಡಿಮೆ.

4. ಎದೆಹಾಲು ಪುಕ್ಕಟೆಯಾಗಿ ದೊರೆಯುವ ದೇವರ ಅದ್ಭುತ ಕೊಡುಗೆ. ಇದಕ್ಕಾಗಿ ತಾಯಿಗೆ 500 ಕ್ಯಾಲರಿಯಷ್ಟು ಹೆಚ್ಚು ಶಕ್ತಿಯ ಅವಶ್ಯಕವಿರುತ್ತದೆ.

5. ಯಾವುದೇ ಸಮಯದಲ್ಲೂ ಎದೆಹಾಲು ಲಭ್ಯವಿರುತ್ತದೆ ಮತ್ತು ಬ್ಯಾಕ್ಟಿರಿಯಾಗಳಿಂದ ಮುಕ್ತವಾಗಿ ಪರಿಶುದ್ಧವಾಗಿರುತ್ತದೆ.

6. ಇದರಲ್ಲಿರುವ ಪೋಷಕಾಂಶಗಳು ಮಗುವಿನ ಆರೋಗ್ಯಪೂರ್ಣ ಬೆಳವಣಿಗೆಗೆ ಪೂರಕವಾಗಿರುತ್ತದೆ. ಸುಲಭವಾಗಿ ಜೀರ್ಣವಾಗುತ್ತದೆ. ಲ್ಯಾಕ್ಟೋಸ್‌ನಿಂದ ಸಮೃದ್ಧವಾಗಿರುತ್ತದೆ.

7. ತಾಯಿಯ ಎದೆಹಾಲು ಮಗುವನ್ನು ವಿವಿಧ ರೀತಿಯ ಸೋಂಕಿನಿಂದ ತಡೆಯುತ್ತದೆ.

8. ಮಗುವಿನ ಬೆಳವಣಿಗೆಗೆ ಪೂರಕ ವಾದ ಸಕಲ ಅಂಶಗಳೂ ತಾಯಿ ಎದೆ ಹಾಲಿನಲ್ಲಿರುತ್ತದೆ.

9. ತಾಯಿ ಎದೆಹಾಲಿನಿಂದ ಅಲರ್ಜಿ ಸಂಭವಿಸುವುದು ಅಪರೂಪ. ಆದುದರಿಂದ ಈ ಹಾಲು ಅನಾರೋಗ್ಯ ಪೀಡಿತ ಮಗುವಿಗೂ ಉಣಿಸಬಹುದು.

10. ಎದೆಹಾಲನ್ನು ಹಿಂಡಿ ತೆಗೆದು ಫ್ರಿಜ್‌ನಲ್ಲಿ ಸಂಗ್ರಹಿಸಿಡಬಹುದು. ಇದು ಉದ್ಯೋಗಸ್ಥ ಮಹಿಳೆಯರಿಗೆ ಹಾಗೂ ಸ್ತನದ ತೊಟ್ಟಿನಲ್ಲಿ ತೊಂದರೆ, ನೋವು ಇರುವ ಮಹಿಳೆಯರಿಗೆ ಉಪಯುಕ್ತ. ಚೀಪುವ ಸಾಮರ್ಥ್ಯವಿಲ್ಲದ ಮಕ್ಕಳಿಗೆ, ಸೀಳು ತುಟಿ ಇದ್ದ ಮಕ್ಕಳಿಗೂ ಈ ರೀತಿ ಎದೆ ಹಾಲನ್ನು ಸಂಗ್ರಹಿಸಿಟ್ಟು ಕೊಡಬಹುದಾಗಿದೆ.

Leave a Reply