(Photo | Albin Mathew, EPS)

ಕೊಚ್ಚಿ: ಕಣ್ಣಿಲ್ಲ ಎಂದರೆ ಇಡೀ ಜಗತ್ತೇ ಕತ್ತಲು ಎಂದು ಭಾವಿಸುವಾಗ ಸ್ಕೂಲ್ ಫಾರ್ ದಿ ಬ್ಲೈಂಡ್‌ನ 11 ವರ್ಷದ ವಿದ್ಯಾರ್ಥಿ ಆರ್ ಮನೋಜ್ ನಮ್ಮೆಲ್ಲರನ್ನು ಕಣ್ಣು ತೆರೆಯುವಂತೆ ಮಾಡಿದ್ದಾನೆ. ಅಲುವಾ ಮನಪ್ಪುರಂನಲ್ಲಿ ಈ ವಿದ್ಯಾರ್ಥಿ ನದಿಯನ್ನು ದಾಟುವ ಸಾಹಸಕ್ಕೆ ಇಳಿದಿದ್ದ. ಇದು ಸುಲಭದ ಕೆಲಸವಲ್ಲ, ಕಣ್ಣಿಲ್ಲ ಆದ್ದರಿಂದ ಜನರಲ್ಲಿ ಸಹಜವಾಗಿ ಕುತೂಹಲವಿತ್ತು. ಹುಟ್ಟಿನಿಂದ ಕುರುಡನಾಗಿದ್ದ ಮನೋಜ್ ಅದ್ವೈತ ಆಶ್ರಮದಿಂದ ಅಲುವಾ ಮನಪ್ಪುರಂ ವರೆಗೆ ಪೆರಿಯಾರ್ ನದಿ ದಾಟಿದ್ದಾರೆ. ಈ ಸಂದರ್ಭದಲ್ಲಿ ಅವರ ತರಬೇತುದಾರ ಸಾಜಿ ವಲಸೆರಿಲ್ ಕೂಡ ಜೊತೆಗಿದ್ದರು.

ನನ್ನ ಹಿರಿಯರಲ್ಲಿ ಒಬ್ಬರಾದ ನವನೀತ್ ಕೂಡ ಈ ಸಾಧನೆ ಮಾಡಿದ್ದರು, ಅದುವೇ ನನಗೆ ಪ್ರೇರಣೆ ಎಂದು ಹುಟ್ಟಿನಿಂದ ಕುರುಡ ಆಗಿರುವ ಮನೋಜ್ ಹೇಳಿದರು. ನವನೀತ್ ಕೂಡ ಸಾಜಿಯವರ ವಿದ್ಯಾರ್ಥಿಯಾಗಿದ್ದ. ಮನೋಜ್ ಸಾಜಿ ಯವರಿಂದ ಒಂದು ತಿಂಗಳಿನಿಂದ ಈಜು ತರಬೇತಿ ಪಡೆಯುತ್ತಿದ್ದರು. ಬೆಳಿಗ್ಗೆ 8.00 ರ ಸುಮಾರಿಗೆ ಅದ್ವೈತ ಆಶ್ರಮದ ಮುಖ್ಯಸ್ಥ ಸ್ವಾಮಿ ಸ್ವರೂಪಾನಂದ ಸ್ವಾಮಿಕಲ್ ಬಾವುಟ ಹಾರಿಸಿದರು.ಈ ಸಂದರ್ಭದಲ್ಲಿ ಶಿಕ್ಷಕರು ಮತ್ತು ಶಾಲೆಯ ಸ್ನೇಹಿತರು ಉಪಸ್ಥಿತರಿದ್ದು ಅವರು ದಡ ಸೇರುವವರೆಗೆ ಪ್ರೇಕ್ಷಕರು ಹುರಿದುಂಬಿಸಿದರು. ಶಾಲೆಯ ಬ್ಯಾಂಡ್ ತಂಡವೂ ಇತ್ತು. ಬಳಿಕ ಜೋರಾಗಿ ಹರ್ಷೋದ್ಗಾರ ಮತ್ತು ಚಪ್ಪಾಳೆಯೊಂದಿಗೆ ಮನೋಜ್ ರನ್ನು ಸ್ವಾಗತಿಸಲಾಯಿತು.

ನೀರಿನಲ್ಲಿ ಮುಳುಗುವ ಅನೇಕ ಪ್ರಕರಣಗಳನ್ನು ನಾವು ಕೇಳುತ್ತೇವೆ. ಆದ್ದರಿಂದ ಪ್ರತಿಯೊಬ್ಬರೂ ಈಜು ಕಲಿಯುವುದು ಬಹಳ ಮುಖ್ಯ. ಇದರಿಂದ ಸಾವು ನೋವು ತಪ್ಪಿಸಬಹುದು. ಇದರ ಬಗ್ಗೆ ಅರಿವು ಮೂಡಿಸಲು ನಾನು ಹೀಗೆ ಮಾಡಿದೆ ಎಂದು ಮನೋಜ್ ಹೇಳಿದರು. ಕಳೆದ 11 ವರ್ಷಗಳಲ್ಲಿ ಜನರಿಗೆ ಉಚಿತವಾಗಿ ತರಬೇತಿ ನೀಡುತ್ತಿರುವ ಅವರ ತರಬೇತುದಾರ ಸಾಜಿ, ಮನೋಜ್ ಸಾಧನೆಯ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ. ಈಜು ಶಾಲೆಯ ಪಠ್ಯ ಕ್ರಮದ ಭಾಗವಾಗಬೇಕು ಎಂದು ಹೇಳಿದರು.

Leave a Reply