ಒಡಿಶಾದಲ್ಲಿ ಬಡ ಕಾರ್ಮಿಕನೊಬ್ಬ ಬಹಳ ದೊಡ್ಡ ಸಾಧನೆ ಮಾಡಿದ್ದಾರೆ. ತನ್ನ ಮೂವರು ಮಕ್ಕಳಿಗೆ ಶಾಲೆಗೆ ಹೋಗಿ ಬರಲು ಸುಲಭವಾಲಿ ಎಂದು ಗುಡ್ಡವೊಂದನ್ನು ಕಡಿದು 15 ಕಿ.ಮೀ ರಸ್ತೆ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಕಳೆದ ಎರಡು ವರ್ಷಗಳಿಂದ ಅವರು ಗುಡ್ಡವನ್ನು ಕೊರೆಯುವ ಕೆಲಸದಲ್ಲಿ ನಿರತರಾಗಿದ್ದರು.

ಒಡಿಶಾದ ಗುಮ್ಸಾಹಿ ಗ್ರಾಮದಲ್ಲಿ ವಾಸವಾಗಿ ರುವ ಜಲಂದರ್ ನಾಯಕ್(45)ರವರ ಊರಲ್ಲಿ ಯಾವುದೇ ಶಾಲೆಗಳಿಲ್ಲ. ಕಂದಮಹಲ್ ಜಿಲ್ಲೆಯ ಫೂಲ್‌ಬನಿ ಪಟ್ಟಣದಲ್ಲಿ ಶಾಲೆಯಿದ್ದು, ಅಲ್ಲಿಗೆ ಹೋಗಲು 15ಕೀ.ಮೀ ಗುಡ್ಡಗಾಡು ಪ್ರದೇಶ ದಾಟಿ ಹೋಗಬೇಕು. ಆದರೆ ಅಲ್ಲಿಗೆ ತೆರಳಲು ಸೂಕ್ತ ರಸ್ತೆ ಅಥವಾ ಸಾರಿಗೆ ಸೌಲಭ್ಯಗಳಿಲ್ಲದಿದ್ದರಿಂದ ತಮ್ಮ ಗ್ರಾಮದ ಮಕ್ಕಳು ಶಾಲೆಗೆ ಹೋಗಲು ನೆರವಾಗುವಂತೆ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು, ಇದಕ್ಕಾಗಿ ಪರಿಶ್ರಮ ಪಟ್ಟ ಅವರಿಗೆ ಎಂಜಿಎನ್‌ಆರ್‌ಇಜಿಎಸ್ ಯೋಜನೆಯಡಿ ಹಣ ಪಾವತಿಸಲಾಗುತ್ತದೆ ಎಂದು ಹೇಳಲಾಗಿದೆ.

ಸಾಂದರ್ಭಿಕ ಚಿತ್ರ

ಈ ಹಿಂದೆ ದಶರಥ ಮಾಂಝೀ ಎಂಬ ಬಿಹಾರದ ವ್ಯಕ್ತಿಯ ಹೆಂಡತಿ ಸರಿಯಾಗಿ ರಸ್ತೆ ಸೌಲಭ್ಯ ಇಲ್ಲದೆ ಸಾವನ್ನಪ್ಪಿದರು. ಬೇರೆ ಯಾರಿಗೂ ಈ ಪರಿಸ್ಥಿತಿ ಬರದೇ ಇರಲಿ ಎನ್ನುವ ಕಾರಣಕ್ಕೆ ಸತತ 22 ವರ್ಷಗಳ ಕಾಲ ಬೆಟ್ಟವೊಂದು ಕಡಿದು ಗ್ರಾಮಕ್ಕೆ ರಸ್ತೆ ನಿರ್ಮಾಣ ಮಾಡಿ ಸಾಧನೆಗೈದಿದ್ದರು. ಅವರ ಹೆಸರಲ್ಲಿ ಸಿನೆಮಾ ಕೂಡ ರಚನೆಯಾಗಿದೆ.

Leave a Reply