ಇದು ನಮ ಊರು: ಓದು ಗೊತ್ತಿಲ್ಲದ ಹಳ್ಳಿಯ ಬಡ ಮುಗ್ದ ಬಾಲಕಿಯ ಬ್ಯಾಂಕ್ ಖಾತೆಗೆ 9 ಕೋಟಿ 99 ಲಕ್ಷ 4 ಸಾವಿರ 736 ರೂಪಾಯಿ ಹಣ ಜಮಾವಣೆಯಾಗಿದೆ. ಸರೋಜ್ ಉತ್ತರಪ್ರದೇಶದ ಬಲ್ಲಿಯಾ ಜಿಲ್ಲೆಯ ರುಕುನ್‌ಪುರ ಗ್ರಾಮದ ನಿವಾಸಿ ಆಕೆ ಶಾಲೆ ಕಲಿತಿಲ್ಲ, ಓದು ಬರಹ ಗೊತ್ತಿಲ್ಲ ಹೇಗಾದರೂ ಮಾಡಿ ಸಹಿ ಹಾಕುವುದನ್ನು ಕಲಿತಿದ್ದಾಳೆ. ಇಂತಹ ಹುಡುಗಿಯ ಖಾತೆಯಲ್ಲಿ ಕೋಟಿ ಕೋಟಿ ರೂಪಾಯಿಗಳ ವ್ಯವಹಾರ ನಡೆಯಲು ಹೇಗೆ ಸಾಧ್ಯ ಎಂದು ಸುದ್ದಿ ತಿಳಿದವರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಸುದ್ದಿ ತಿಳಿದು ಸರೋಜ್ ಪರಿವಾರ ಭಯಭೀತವಾಗಿದೆ.

ಅಲಹಾಬಾದ್ ಬ್ಯಾಂಕಿನ ಬನ್ಸ್‌ಡಿಹ್ ಶಾಖೆಯಲ್ಲಿ ಸರೋಜ್ ಖಾತೆಯನ್ನು ಹೊಂದಿದ್ದಾಳೆ. ಸರೋಜ್ ಹೇಳುವ ಪ್ರಕಾರ 2018 ರಲ್ಲಿ ತಮ್ಮ ಖಾತೆಯನ್ನು ತೆರೆಯಲಾಗಿದೆ. ಮೊನ್ನೆ ಬ್ಯಾಂಕ್ ಗೆ ತೆರಳಿ ತನ್ನ ಖಾತೆಯಲ್ಲಿರುವ ಹಣವನ್ನು ಪರಿಶೀಲಿಸಿದಾಗ ಸರೋಜ್ ಗೆ ಈ ವಿವರ ಗೊತ್ತಾಗಿದೆ.

ಸರೋಜ್ ಇದೀಗ ಪೊಲೀಸರಿಗೆ ಮಾಹಿತಿ ನೀಡಿರುವ ಪ್ರಕಾರ, ”ಎರಡು ವರ್ಷಗಳ ಹಿಂದೆ ನಿಲೇಶ್ ಎಂಬ ವ್ಯಕ್ತಿ ಪಿಎಂ ಆವಾಸ್ ಯೋಜನೆಯಲ್ಲಿ ಮನೆ ತೆಗೆದು ಕೊಡುವುದಾಗಿ ಹೇಳಿ ಹೆಸರಿನಲ್ಲಿ ತನ್ನ ಆಧಾರ್ ಕಾರ್ಡ್ ಮತ್ತು ಫೋಟೋ ಕೇಳಿದ್ದ. ನಂತರ ನನ್ನ ಎಟಿಎಂ ಕಾರ್ಡ್ ಬಂದಿತ್ತು. ಅದನ್ನು ನಿಲೇಶ್ ನೋಂದಾವಣೆಗೆ ಅಗತ್ಯವಿದೆ ಎಂದು ಹೇಳಿ ಪಡೆದಿದ್ದ,” ಬ್ಯಾಂಕ್ ನೌಕರರ ಪ್ರಕಾರ, ಈ ಬ್ಯಾಂಕ್ ಖಾತೆಯಲ್ಲಿ ಅನೇಕ ವ್ಯವಹಾರಗಳು ನಡೆದಿವೆ. ಆದರೆ ಅದರ ಯಾವುದೇ ಮಾಹಿತಿ ನನಗೆ ಇಲ್ಲ ಎಂದು ಸರೋಜ್ ನಿರಾಕರಿಸಿದ್ದಾಳೆ. ನಿಲೇಶ್ ತನ್ನೊಂದಿಗೆ ಮಾತನಾಡುತ್ತಿದ್ದ ಫೋನ್ ಸಂಖ್ಯೆಯನ್ನು ಸಹ ಸ್ವಿಚ್ ಆಪ್ ಮಾಡಲಾಗಿದೆ ಎಂದು ಆಕೆ ಹೇಳಿದ್ದಾಳೆ. ಒಟ್ಟಾರೆಯಾಗಿ ಇದು ಯಾವುದೋ ಅಕ್ರಮ ಚಟುವಟಿಕೆಯ ಹಣವಾಗಿದ್ದು, ಬಾಲಕಿಯ ಮುಗ್ಧತೆ ಯನ್ನು ಬಳಸಿ ಆಕೆಯನ್ನು ಈ ಖೆಡ್ದಾ ದಲ್ಲಿ ಬಲಿಪಶು ಮಾಡಲಾಗಿದೆ.

Leave a Reply