ಮಂಗಳೂರು: ಸುರತ್ಕಲ್ ಸಮೀಪದ ಕಾಟಿಪಳ್ಳ ಎಂಬಲ್ಲಿ ದೀಪಕ್ ರಾವ್ ಹತ್ಯೆ ನಡೆದ ಬಳಿಕ ದೀಪಕ್ ತಾಯಿಯ ಬ್ಯಾಂಕ್ ಖಾತೆಗೆ ಲಕ್ಷಾಂತರ ಹಣವನ್ನು ಜಮೆ ಮಾಡಿ ಸಾರ್ವಜನಿಕರು ಮಾನವೀಯತೆ ಮೆರೆದಿದ್ದಾರೆ.

ದೀಪಕ್ ತಾಯಿ ಪ್ರೇಮಾ ರಾವ್ ಅವರ ಮಂಗಳೂರಿನ ಕಾಟಿಪಳ್ಳದ ಸಿಂಡಿಕೇಟ್ ಬ್ಯಾಂಕಿನಲ್ಲಿ ಬರೋಬ್ಬರಿ 17,43,859 ರೂಪಾಯಿ ಸಂಗ್ರಹವಾಗಿದೆ.

ದೀಪಕ್ 11 ಸಾವಿರ ರೂಪಾಯಿಗೆ ಓರ್ವ ಮುಸ್ಲಿಂ ವ್ಯಕ್ತಿಯ ಅಂಗಡಿಯಲ್ಲಿ ಕೆಲಸಕ್ಕಿದ್ದ. ಚಿಕ್ಕಂದಿನಿಂದಲೇ ತಂದೆಯನ್ನು ಕಳಕೊಂಡು ಇಡೀ ಕುಟುಂಬಕ್ಕೆ ಆತನೇ ಏಕೈಕ ಆಸರೆ.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ದೀಪಕ್ ತಾಯಿಯ ಅಕೌಂಟ್ ಡಿಟೈಲ್ಸ್ ಹಾಕಿ, ಸಹೃದಯಿಗಳು ಈ ಬಡ ಕುಟುಂಬಕ್ಕೆ ದ ಸಹಾಯ ನೀಡುವಂತೆ ಮನವಿ ಮಾಡಲಾಗಿತ್ತು. ಇದಕ್ಕೆ ಭಾರೀ ಸ್ಪಂದನೆ ವ್ಯಕ್ತವಾಗಿದ್ದು ಒಂದೇ ದಿನದಲ್ಲಿ 17 ಲಕ್ಷಕ್ಕಿಂತ ಹೆಚ್ಚು ಮೊತ್ತ ಜಮಾವಣೆಯಾಗಿದೆ.

Leave a Reply