ಭಾರತದ ಪ್ರಮುಖ ವಿಶ್ವವಿದ್ಯಾಲಯದಲ್ಲಿ ಒಂದಾದ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ದೇಶದಲ್ಲಿ ಚರ್ಚೆಗೀಡಾದ ವಿಶ್ವವಿದ್ಯಾನಿಲಯ. ಲ್ಕ ಹೆಚ್ಚಳ ಪ್ರತಿಭಟನೆ ಒಂದೆಡೆ ಇನ್ನೊಂದೆಡೆ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ಗೆ ಒಳಗೆ ಪ್ರವೇಶಿಸಿ ವಿದ್ಯಾರ್ಥಿಗಳ ಮೇಲಿನ ದಾಳಿಗೆ ಇನ್ನಷ್ಟು ಚರ್ಚೆಗೆ ಗುರಿಯಾಗಿತ್ತು. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ವಿದ್ಯಾರ್ಥಿಗಳು ಈ ಬಗ್ಗೆ ಪ್ರತಿಭಟನೆಯನ್ನು ಕೈಗೊಂಡರು. ದೇಶದ ಯಾವುದೇ ವಿಷಯಕ್ಕೆ ಸಂಬಂಧಿಸಿ ಜೆಎನ್‌ಯು ಕೇಂದ್ರಿತ ಪ್ರತಿಭಟನೆಗಳು ನಡೆಯುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಕಲಿಯುವುದಕ್ಕಿಂತ ಹೋರಾಟದಲ್ಲಿ ಹೆಚ್ಚು ಇರುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ಯುಪಿಎಸ್ಸಿ ಫಲಿತಾಂಶ ತೀರಾ ತದ್ವಿರುದ್ಧವಾಗಿದೆ.ಯುಪಿಎಸ್ಸಿ ಭಾರತೀಯ ಆರ್ಥಿಕ ಸೇವೆಗಳು ಅಥವಾ ಐಇಎಸ್ ಪರೀಕ್ಷೆಗಳ ಫಲಿತಾಂಶಗಳು ಹೊರಬಂದಿದ್ದು, ಅದರಲ್ಲಿ 32 ಅಭ್ಯರ್ಥಿಗಳಲ್ಲಿ 18 ಮಂದಿ ಜೆಎನ್‌ಯು ಹಳೆಯ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

” ನಮಗೆಲ್ಲರಿಗೂ ತುಂಬಾ ಸಂತಸವಾಗಿದೆ. ಈ ವರ್ಷ 18 ಜೆಎನ್‌ಯು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಇವರು ಜೆಎನ್‌ಯುನ ಭಾಗವಾಗಿದ್ದರಿಂದ ಇವರ ಸಾಧನೆ ನಮಗೆ ಹೆಮ್ಮೆಯಾಗಿದೆ. ಜೆಎನ್‌ಯು ಬಗ್ಗೆ ಏನಾದರೂ ಕೆಟ್ಟದ್ದನ್ನು ಹೇಳಿದಾಗ ನೋವುಂಟುಮಾಡುತ್ತದೆ, ಇಂತಹ ಫಲಿತಾಂಶ ಅದರ ಇನ್ನೊಂದು ಭಾಗವನ್ನು ತೋರಿಸುತ್ತದೆ” ಎಂದು ಯಶಸ್ವಿನಿ ಸರಸ್ವತ್ ಜೆಎನ್‌ಯು ವಿದ್ಯಾರ್ಥಿಗಳ ಯಶಸ್ಸಿನ ಕುರಿತು ಮಾತನಾಡಿದರು. ಯಶಸ್ವಿನಿ ಸರಸ್ವತ್, ಅಗ್ರ 10 ರಲ್ಲಿದ್ದು, ಪರೀಕ್ಷೆಯಲ್ಲಿ 8 ನೇ ರ್ಯಾಂಕ್ ಗಳಿಸಿದ್ದಾರೆ.

ANI

ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾಲಯ ಆಡಳಿತದ ನಡುವೆ ತಿಂಗಳುಗಟ್ಟಲೆ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಜೆಎನ್‌ಯು ಸದಾ ವಿವಾದಗಳಲ್ಲಿ ಸಿಲುಕಿದೆ. ಅಲ್ಲಿ ನಡೆದ ದಾಳಿಯ ಬಗ್ಗೆ ಪೊಲೀಸ್ ತನಿಖೆ ನಡೆಸುತ್ತಿದೆ. ಇತ್ತೀಚಿನ ಘಟನೆಗಳ ಹಿನ್ನೆಲೆಯಲ್ಲಿ, ಜೆಎನ್‌ಯುಟಿಎ (ಶಿಕ್ಷಕರ ಸಂಘ) ಮತ್ತು ವಿದ್ಯಾರ್ಥಿಗಳು ಇಬ್ಬರೂ ನಿನ್ನೆ ಪುನರಾರಂಭಗೊಳ್ಳುವ ಚಳಿಗಾಲದ ಅಧಿವೇಶನದ ತರಗತಿಗಳನ್ನು ಬಹಿಷ್ಕರಿಸಿದ್ದಾರೆ.

LEAVE A REPLY

Please enter your comment!
Please enter your name here