ಲಂಡನ್: ಬ್ರಿಟನ್‍ನ ಓರ್ವ ಮಹಿಳೆ ಲಿಂಡ್ಸೆ ಕುಬ್ರೆರ್ ವಿಚಿತ್ರ ರೋಗದಿಂದ ನರಳುತ್ತಿದ್ದಾರೆ. ಈ ರೋಗದಿಂದಾಗಿ ಅವರು ಸಾಧಾರಣ ಜೀವನ ನಡೆಸಲಾಗುತ್ತಿಲ್ಲ. ಮಾಧ್ಯಮಗಳ ವರದಿಯ ಪ್ರಕಾರ ಲಿಂಡ್ಸೆ ಇತರರಂತೆ ಅಳಲಾರರು. ಮಳೆಯಲ್ಲಿ ನೆನೆಯುವ ಮಜಾ ಅನುಭವಿಸಲಾರರು. ನೀರು ಕುಡಿಯಲಾರರು. ಕೇಳಲು ಇದು ದೊಡ್ಡ ವಿಚಿತ್ರವಾಗಿದೆ ಬಿಡಿ.

ಆದರೆ ಲಿಂಡ್ಸೆ ಕಷ್ಟ ಲಿಂಡ್ಸೆಗೆ ಗೊತ್ತು. ಎಕ್ವಾಜನಿಕ್ ಅಟ್‍ಕೆರಿಯ ಎನ್ನುವ ರೋಗದಿಂದ ಲಿಂಡ್ಸೆ ಬಳಲುತ್ತಿದ್ದಾರೆ. ಈ ರೋಗಿಗಳಿಗೆ ನೀರಿನಿಂದ ಎಲರ್ಜಿಯಾಗುತ್ತದೆ.

ಇದು ಅಪರೂಪದ ರೋಗ ಜಗತ್ತಿನಲ್ಲಿ ಕೇವಲ 50 ವ್ಯಕ್ತಿಗಳಿಗೆ ಇದೆ. ಲಿಂಡ್ಸೆಯ ಜೀವನ ಖಂಡಿತಾ ಸಾಮಾನ್ಯ ರೀತಿಯಲ್ಲಿಲ್ಲ. ನೀರಿನ ಎಲರ್ಜಿಯಿರುವುದರಿಂದ ಆವರು ಇತರರಂತೆ ಸ್ನಾನ ಮಾಡಲಾರರು. ಕೇವಲ ಹಾಲಿನಿಂದ ಮಾಡಿದ ವಸ್ತುಗಳನ್ನು ಮಾತ್ರ ಸೇವಿಸಬಹುದು. ಇತರರಂತೆ ಮನೆಯಿಂದ ಹೊರಗಿಳಿಯುವಂತಿಲ್ಲ. ನೀರಿನಿಂದ ಸ್ವಲ್ಪ ಒದ್ದೆಯಾದರೂ ಸಾಕು ಉಸಿರಾಡಲು ಅವರಿಗೆ ಕಷ್ಟ ಆಗುತ್ತದೆ. ಅವರ ಶರೀರದಲ್ಲಿ ಕೆಲವು ಕೆಂಪು ಕಲೆಗಳಿವೆ. ಉಸಿರಾಟ ಎಷ್ಟು ವೇಗವಾಗಿ ನಡೆಯುತ್ತಿದೆ ಎಂದರೆ ಕೆಲವೊಮ್ಮೆ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಬೇಕಾಗುತ್ತದೆ.

ಆದರೂ ಲಿಂಡ್ಸೆ ಸುಮ್ಮನೆ ಕುಳಿತಿಲ್ಲ. ಆಫಿಸ್ ಅಸಿಸ್ಟೆಂಟ್ ಆಗಿ ದುಡಿಯುತ್ತಿದ್ದಾರೆ. ಅವರಿಗೆ ಅವರ ಒಂದೊಂದು ದಿನವೂ ಸವಾಲಿನದ್ದಾಗಿರುತ್ತದೆ. ನೀರು ತಾಗಿದರೆ ತನ್ನ ಕಣ್ಣಿಂದ ನೀರು ಧಾರಾಕಾರವಾಗಿ ಸುರಿಯ ತೊಡಗುತ್ತದೆ ಎಂದು ಲಿಂಡ್ಸೆ ಹೇಳುತ್ತಾರೆ.

Leave a Reply