ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಮೋದಿ ಸರಕಾರವು ಮತ್ತೊಮ್ಮೆ 2000 ರೂಪಾಯಿ ಬ್ಯಾನ್ ಮಾಡಿ ಹೊಸ ವರ್ಷದಿಂದ 1 ಸಾವಿರ ನೋಟುಗಳನ್ನು ಹೊರತರಲಿದೆ ಎಂದು ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳು ಹರಡುತ್ತಿದೆ. ಆದರೆ ರಿಸರ್ವ್ ಬ್ಯಾಂಕ್ ಇಂತಹ ಯೋಜನೆಯನ್ನು ನಿರಾಕರಿಸಿದೆ. ಆದರೆ 2000 ನೋಟ್ ಬ್ಯಾನ್ ವದಂತಿಯೂ ಭಾರತದಲ್ಲಿ ಮತ್ತೊಮ್ಮೆ ವ್ಯಾಪಕವಾಗಿ ಹರಿದಾಡುತ್ತಿದೆ.

ಹರಿಭೂಮಿಯಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಎಟಿಎಂ ನಲ್ಲಿ ಎರಡು ಸಾವಿರ ನೋಟುಗಳ ಕೊರತೆಯೇ ಇಂತಹ ಆಧಾರ ರಹಿತ ಸಂದೇಶಗಳಿಗೆ ಪುಷ್ಟಿ ನೀಡಿದ್ದು, ಹೊಸ ವರ್ಷದಿಂದ ಎರಡು ಸಾವಿರ ನೋಟುಗಳನ್ನು ನಿಲ್ಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಎರಡು ಸಾವಿರ ನೋಟ್ ಬದಲಿಗೆ ಒಂದು ಸಾವಿರ ನೋಟ್ ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಮಾತ್ರವಲ್ಲ ಆರ್‌ಬಿಐ 2000 ರ ಎಲ್ಲಾ ನೋಟುಗಳನ್ನು ಹಿಂತೆಗೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಜನವರಿ 1 ರಿಂದ ಮತ್ತೆ ನೋಟ್ ಅಮಾನ್ಯ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ ಎಂದು ಸಂದೇಶಗಳು ಹರಿದಾಡುತ್ತಿದೆ. ಆದರೆ, ಆರ್‌ಬಿಐ ಈ ಮಾಹಿತಿಯನ್ನು ಆಧಾರರಹಿತ ಎಂದು ಸ್ಪಷ್ಟಪಡಿಸಿದೆ.

LEAVE A REPLY

Please enter your comment!
Please enter your name here