ಬಾರಬಂಕಿ: ಉತ್ತರಪ್ರದೇಶದ ಬಾರಬಂಕಿಯಲ್ಲಿ ಬಾಲಕನೊಬ್ಬನ ಕೈಕಾಲುಗಳಲ್ಲಿ 24 ಬೆರಳುಗಳಿವೆ. ಇದೇ ಈತ ಆತನ ಜೀವಕ್ಕೆ ಅಪಾಯವನ್ನು ತಂದೊಡ್ಡಿದೆ. ಒಬ್ಬ ಮಂತ್ರವಾದಿ ಈ ಹುಡಗನನ್ನು ಬಲಿಕೊಟ್ಟರೆ ಶ್ರೀಮಂತರಾಗುತ್ತೀರಾ, ಹುಡುಗನ ಕೈಕಾಲುಗಳಲ್ಲಿ 24 ಬೆರಳುಗಳಿವೆಯಲ್ಲ ಎಂದು ಹೇಳಿದ್ದರು. ಇದನ್ನೆ ತಲೆಗೆ ಹಚ್ಚಿಕೊಂಡ ಬಂಧುಗಳು ಬಾಲಕನನ್ನು ಬಲಿದಾನ ನೀಡಲು ಒತ್ತಾಯಿಸತೊಡಗಿದ್ದಾರೆ.

ರಾಮನಗರ ಠಾಣಾ ವ್ಯಾಪ್ತಿಯ ಗುರ್ರಿ ಎಂಬಲ್ಲಿನ ನಿವಾಸಿ ಕುಣ್ಣಿಲಾಲ್‍ರ ಪುತ್ರ ಸುರೇಂಧ್ರ ಉರುಫ್ ಶಿವನಂದನ ಒಂಬತ್ತನೆ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಇವನನ್ನು ಬಲಿಕೊಡಬೇಕೆಂದು ಹೇಳಿರುವುದುಕಣ್ಣಿಲಾಲ್‍ಮತ್ತು ಅವರ ಪತ್ನಿಗೆ ಆರದ ಗಾಯವಾಗಿ ಬಿಟ್ಟಿದೆ. ಮಗನನ್ನು ಹೊರಗೆ ಕಲ್ಲಿಸುವ ಸ್ಥಿತಿಯಲ್ಲೂ ಅವರಿಲ್ಲ. ಯಾಕೆಂದೆರೆ ಶಿವನಂದನನ್ನು ಯಾರಾದರೂ ಅಪಹರಿಸಿ ಬಲಿ ನೀಡಿದರೆ ಎಂಬ ಹೆದರಿಕೆ ಅವರನ್ನು ಬೆನ್ನಟ್ಟತೊಡಗಿದೆ.ಆದ್ದರಿಂದಶಿವನಂದನನ್ನುಈಗ ಶಾಲೆಗೆಳುಹಿಸುವುದು ನಿಲ್ಲಿಸಿದ್ದಾರೆ.

ಕೈಕಾಲುಗಳಲ್ಲಿರುವ ಆರು ಬೆರಳು ಈಗ ಶಿವನಂದನಿಗೆ ತಲೆನೋವು ಮಾತ್ರವಲ್ಲ ಸಂಬಂಧಿಕರ ಬೆದರಿಕೆಯೂ ಸೇರಿ ಅನಿವಾರ್ಯವಾದಾಗ ಶಿವನಂದನಶಾಲೆಯನ್ನುಮೊಟಕುಗೊಳಿಸಲು ನಿರ್ಧರಿಸಬೇಕಾಯಿತು.ಶಿವನಂದನ ನ್ನು ಬಲಿಕೊಡಬೇಕೆನ್ನುವ ಕುಟುಂ¨ಸ್ಥರಬೇಡಿಕೆಪುನಃ ಹೆಚ್ಚುತ್ತಿದೆ. ಅಂತಿಮವಾಗಿ ಶಿವಾನಂದನ ತಂದೆ ಪೊಲೀಸರ ಸಹಾಯವನ್ನು ಯಾಚಿಸಿದ್ದಾರೆ.

Leave a Reply