ಪಶ್ಚಿಮ ಬಂಗಾಳ: ಮೂವರು ಕೈದಿಗಳು ಸಿನೆಮಾದೃಶ್ಯದಂತೆ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಓಡಿಹೋಗಿದ್ದಾರೆ. ಪೊಲೀಸರು ಅವರನ್ನು ತಡೆಯಲು ಪ್ರಯತ್ನಿಸಿದ ಮೇಲೆ ಫೈರಿಂಗ್ ಮಾಡಿ ಬಾಂಬು ಎಸೆದಿದ್ದಾರೆ. ಇಡೀ ಘಟನೆಗೆ ಸಂಬಂಧಿಸಿದ ವಿಡಿಯೊ ಬಹಿರಂಗಗೊಂಡಿದ್ದು, ಇದರಲ್ಲಿ ಕೈದಿಗಳು ನಿರ್ಭೀತಿಯಿಂದಿರುವುದು ಕಂಡು ಬರುತ್ತಿದೆ. ಆದರೆ ಒಬ್ಬ ಕೈದಿಯನ್ನು ಹಿಡಿದಿಟ್ಟುಕೊಳ್ಳುಪೊಲೀಸರು ಯಶಸ್ವಿಯಾದರು.

ಈ ಘಟನೆ ಕೊಂಟೋಯಿ ಎಂಬಲ್ಲಿನ ನ್ಯಾಯಾಲಯ ಪರಿಸರದಲ್ಲಿ ನಡೆದಿದೆ. ದರೋಡೆ ಪ್ರಕರಣದಲ್ಲಿನ ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಪೊಲೀಸರು ಕರೆ ತಂದಿದ್ದರು. ಅಲ್ಲಿ ಅವರ ಸಹಚರನೊಬ್ಬನು ಮೊದಲೇ ಇದ್ದನು. ವಿಚಾರಣಾಧೀನ ಕೈದಿಗಳನ್ನು ನೋಡಿದ ಕೂಡಲೇ ಬಾಂಬು ಎಸೆಯಲು ಆರಂಭಿಸಿದ್ದಾನೆ ಮತ್ತು ಗುಂಡು ಹಾರಿಸಿದ್ದಾನೆ. ವೀಡಿಯೊದಲ್ಲಿ ಆರೋಪಿಗಳು ಬೈಕಿನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವುದು ಕಾಣಿಸುತ್ತಿದೆ.

ದುರುಳರು ಸ್ಥಳೀಯ ಜನರ ಮೇಲೆ ಕೂಡ ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯ ಗೊಂಡಿದ್ದಾರೆ. ಪೂವಧ ಮಿಡ್ನಾಪುರದ ಪೊಲೀಸ್ ಅಧೀಕ್ಷ ಸೊಲೊಮನ್ ನೆಸಾಕುಮಾರ ಮೂವರು ಆರೋಪಿಗಳಲ್ಲಿ ಒಬ್ಬನ್ನು ಕೊಂಟಾಯಿ ಜಿಲ್ಲೆಯ ಒಂದು ಮನೆಯಿಂದ ಸೆರೆಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳಾದ ಮುನ್ನ, ಸುರ್ಜಿತ್ ಗುರಿಯಾರ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

 

Leave a Reply